ಬೆಂಗಳೂರು: ಹಾಸನ ಯಶವಂತಪುರ(ಬೆಂಗಳೂರು) ರೈಲ್ವೆ ಸಂಚಾರ ಪ್ರಾರಂಭಕ್ಕೆ ಮಹೂರ್ತ ನಿಗದಿಯಾಗಿದೆ. ಮಾ.26ರಂದು ಬೆಳಿಗ್ಗೆ 11 ಗಂಟೆಗೆ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಅಧಿಕೃತ ಉದ್ಘಾಟನೆ ನಡೆಯಲಿದೆ.
ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು, ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ರೇಷ್ಮೆ ಮತ್ತು ಪಶುಸಂಗೋಪನಾ ಸಚಿವರು ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಎ.ಮಂಜು ಮತ್ತಿತರರು ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ. ಬೆಂಗಳೂರು-ಯಶವಂತಪುರ ನಡುವೆ ಪ್ರತಿದಿನ 22679/22680 ಸಂಖ್ಯೆಯ ಸೂಪರ್ ಫಾಸ್ಟ್ ರೈಲು ಸಂಚರಿಸಲಿದೆ.
ಮಾಚರ್್ 27ರಿಂದ ದೈನಂದಿನ ರೈಲು ಸಂಚಾರ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ. ಈ ರೈಲು ಚನ್ನರಾಯಪಟ್ಟಣ, ಶ್ರವಣ ಎಳಗೊಳ, ಬಿ.ಜಿ.ನಗರ, ಯಡಿಯೂರು, ಕುಣಿಗಲ್, ನೆಲಮಂಗಲ ಮತ್ತು ಚಇಕ್ಕಬಾಣಾವರಗಳಲ್ಲಿ ರೈಲು ನಿಲುಗಡೆ ಇರಲಿದೆ. 22680-ಹಾಸನ-ಯಶವಂತಪುರ ಸೂಪರ್ ಫಾಸ್ಟ್ ರೈಲು ಹಾಸನದಿಂದ ಬೆಳಿಗ್ಗೆ 6.30ಕ್ಕೆ ಹೊರಟು 9.15ಕ್ಕೆ ಯಶವಂತಪುರ ತಲುಪಲಿದೆ. ಈ ರೈಲು ಬೆಳಿಗ್ಗೆ 6.58ಕ್ಕೆ ಚನ್ನರಾಯಪಟ್ಟಣ, ಬೆಳಿಗ್ಗೆ 7.06ಕ್ಕೆ ಶ್ರವಣಬೆಳಗೊಳ, 7.34ಕ್ಕೆ ಬಿ.ಜಿ.ನಗರ, ಬೆಳಗ್ಗೆ 7.47ಕ್ಕೆ ಯಡಿಯೂರು, ಬೆಳಿಗ್ಗೆ 8.02ಕ್ಕೆ ಕುಣಿಗಲ್, 8.44ಕ್ಕೆ ನೆಲಮಂಗಲ 8.58ಕ್ಕೆ ಚಿಕ್ಕಬಾಣಾವರ, ತಲುಪಲಿದೆ.
ಇದೇ ರೀತಿ 22679 ಸಂಖ್ಯೆ ಎಕ್ಸ್ಪ್ರೆಸ್ ರೈಲು ಯಶವಂತಪುರದಿಂದ ಸಂಜೆ 6.15ಕ್ಕೆ ಹೊರಟು ರಾತ್ರಿ 9 ಗಂಟೆಗೆ ಹಾಸನ ತಲುಪಲಿದೆ. ಇದು ಸಂಜೆ 6.24ಕ್ಕೆ ಚಿಕ್ಕಬಾಣಾವರ, 6.36ಕ್ಕೆ ನೆಲಮಂಗಲ, ಸಂಜೆ 7.13ಕ್ಕೆ ಕುಣಿಗಲ್, ಸಂಜೆ 7.28ಕ್ಕೆ ಯಡಿಯೂರು, ಸಮಜೆ 7.30ಕ್ಕೆ ಬಿ.ಜಿ.ನಗರ, ಸಂಜೆ 8.09ನಿಮಿಷಕ್ಕೆ ಶ್ರವಣಬೆಳಗೊಳ ರಾತ್ರಿ 8.18ಕ್ಕೆ ಚನ್ನರಾಯಪಟ್ಟಣ ಹಾಗೂ ರಾತ್ರಿ 9ಕ್ಕೆ ಹಾಸನ ತಲುಪಲಿದೆ.
ಈ ರೈಲು 14 ಬೋಗಿಗಳನ್ನು ಒಳಗೊಂಡಿರುತ್ತದೆ. ಇದರಲ್ಲಿ 4 ಎರಡನೇ ದಜರ್ೆ ಚೇರ್ ಕಾರ್, 8 ದೀನದಯಾಳು ಕೋಚ್ಗಳು, 2 ಸೆಕೆಂಡ್ ಕ್ಲಾಸ್ ಲಗೇಜ್ ಹಾಗೂ ವಿಕಲ ಚೇತನ ಕೋಚ್ಗಳು ಇರಲಿವೆ.