News Kannada
Saturday, October 01 2022

ಬೆಂಗಳೂರು ನಗರ

ಇಂದಿನಿಂದ ಹಾಸನ-ಬೆಂಗಳೂರು ನಡುವಿನ ರೈಲು ಸಂಚಾರ ಆರಂಭ! - 1 min read

Photo Credit :

ಇಂದಿನಿಂದ ಹಾಸನ-ಬೆಂಗಳೂರು ನಡುವಿನ ರೈಲು ಸಂಚಾರ ಆರಂಭ!

ಬೆಂಗಳೂರು: ಬಹು ನಿರೀಕ್ಷಿತ ಹಾಸನ-ಬೆಂಗಳೂರು ಜಿಲ್ಲೆ ನಡುವಿನ ರೈಲು ಸಂಚಾರ ಭಾನುವಾರ ಆರಂಭಗೊಂಡಿದ್ದು, ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು ಅವರು ರೈಲಿಗೆ ಹಸಿರು ನಿಶಾನೆ ತೋರಿದರು.

21-yr-old dream fulfilled! Rly Min flags off Hassan-Bengaluru trainನಾಳೆಯಿಂದ ಹಾಸನ-ಬೆಂಗಳೂರು ನಡುವೆ ಸೂಪರ್ ಫಾಸ್ಟ್ ರೈಲು ಸಂಚರಿಸಲಿದೆ. ನಿತ್ಯ ಎರಡು ರೈಲು ಓಡಾಡಲಿದೆ. ರೈಲು 14 ಬೋಗಿಗಳನ್ನು ಒಳಗೊಂಡಿದೆ. ಇಂಟರ್ ಸಿಟಿ, ಪ್ರಯಾಣಿಕರ ರೈಲುಗಳ ಸಂಚಾರ ಕೂಡ ಇದೇ ಸಂದರ್ಭದಲ್ಲಿ ಆರಂಭವಾಯಿತು. ನೂತನ ರೈಲು ನೆಲಮಂಗಲ, ಕುಣಿಗಲ್, ಯಡಿಯೂರು ಮತ್ತು ಶ್ರವಣಬೆಳಗೊಳದ ಮೂಲಕ ಹಾಸನಕ್ಕೆ ತಲುಪಲಿದೆ. ಬಸ್ ಪ್ರಯಾಣಕ್ಕೆ ಹೋಲಿಕೆ ಮಾಡಿದರೆ ಬೆಂಗಳೂರಿನಿಂದ ಹಾಸನಕ್ಕೆ ರೈಲು ತಲುಪುವ ಅವಧಿ ಕಡಿಮೆ  ಇರಲಿದೆ.  ಈ ಮಾರ್ಗದಲ್ಲಿ  ಪ್ಯಾಸೆಂಜರ್ ರೈಲಿನ ಪ್ರಯಾಣದ ಅವಧಿ 3 ಗಂಟೆ 50 ನಿಮಿಷದಲ್ಲಿ  ಮತ್ತು ಸೂಪರ್ ಫಾಸ್ಟ್ ರೈಲು 2 ಗಂಟೆ 40 ನಿಮಿಷಗಳಲ್ಲಿ ಬೆಂಗಳೂರಿನಿಂದ ಹಾಸನಕ್ಕೆ ತಲುಪಲಿದೆ.

ಸಿಎಂ ಸಿದ್ದರಾಮಯ್ಯ, ಮಾಜಿ ಪ್ರಧಾನಿ ದೇವೇಗೌಡ, ಕೇಂದ್ರ ಸಚಿವ ಅನಂತಕುಮಾರ್, ಮೇಯರ್ ಜಿ.ಪದ್ಮಾವತಿ, ಸಚಿವರಾದ ಅರ್.ವಿ. ದೇಶಪಾಂಡೆ, ಜಯಚಂದ್ರ, ಎ. ಮಂಜು, ಸಂಸದ ಡಾ. ಎಂ. ವೀರಪ್ಪ ಮೊಯ್ಲಿ, ಡಿ.ಕೆ. ಸುರೇಶ್, ಶಾಸಕ ಮುನಿರತ್ನ ಭಾಗಿಯಾಗಿದ್ದರು.

See also  ಬೆಂಗಳೂರು ಗ್ರಾಮಾಂತರ ಜಿಲ್ಲೆಯ 123 ಶಾಲಾ ಮಕ್ಕಳಿಗೆ ಕೊರೊನಾ ಸೋಂಕು ದೃಢ.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು