ಬೆಂಗಳೂರು: ಮನೆ ಕಟ್ಟಲು ಪಾಯ ತೋಡುತ್ತಿದ್ದ ವೇಳೆ ಯುವಕನೊಬ್ಬನ ಮೃತದೇಹ ಪತ್ತೆಯಾದ ಘಟನೆ ಬನ್ನೇರುಘಟ್ಟ ರಸ್ತೆಯ ಕ್ಲಾಸಿಕ್ ಆರ್ಕೇಡ್ ಲೇಔಟ್‌ನಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ.
ಕಾರ್ಮಿಕರು ಸುಮಾರು ಬೆಳಿಗ್ಗೆ 10 ಗಂಟೆ ಹೊತ್ತಿಗೆ ಪಾಯ ತೋಡುತ್ತಿದ್ದು, ಈ ವೇಳೆ 25 ರಿಂದ 30 ವರ್ಷ ವಯೋಮಾನದ ಯುವಕನ ಮೃತದೇಹ ಪತ್ತೆಯಾಗಿದೆ. ನಿವೇಶನದ ಮಾಲೀಕರಿಗೆ ಕೂಡಲೇ ಅವರು ವಿಷಯ ತಿಳಿಸಿದ್ದು, ದಕ್ಷಿಣ ತಾಲ್ಲೂಕು ತಹಶೀಲ್ದಾರ್ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ಮಾಡಿಸಿದ್ದೇವೆ. ಉಸಿರುಗಟ್ಟಿಸಿ ಯುವಕನನ್ನು ಕೊಂದಿದ್ದಾರೆ ಎಂದು ಪುಟ್ಟೇನಹಳ್ಳಿ ಪೊಲೀಸರು ತಿಳಿಸಿದ್ದಾರೆ.