News Kannada
Saturday, October 08 2022

ಬೆಂಗಳೂರು ನಗರ

ಬ್ಲಾಕ್ಮೇಲ್ ಮಾಡಿದ ಮಹಿಳೆ ಖತಂ: ಆರೋಪಿಗಳು ಅರೆಸ್ಟ್ - 1 min read

Photo Credit :

ಬ್ಲಾಕ್ಮೇಲ್ ಮಾಡಿದ ಮಹಿಳೆ ಖತಂ: ಆರೋಪಿಗಳು ಅರೆಸ್ಟ್

ರಾಮನಗರ: ಹಣಕ್ಕೆ ಡಿಮ್ಯಾಂಡ್ ಮಾಡುತ್ತಾ ಬ್ಲಾಕ್ ಮೇಲ್ ಮಾಡುತ್ತಿದ್ದ ಪ್ರೇಯಸಿಯನ್ನು ಸುಫಾರಿ ನೀಡಿದ ರಿಯಲ್ ಎಸ್ಟೇಟ್ ಉದ್ಯಮಿ ಸೇರಿದಂತೆ ಏಳು ಮಂದಿಯನ್ನು ರಾಮನಗರ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಬನಶಂಕರಿ ನಿವಾಸಿ ರಿಯಲ್ ಎಸ್ಟೇಟ್ ಉದ್ಯಮಿ ಆರ್.ಕೇಶವಮೂರ್ತಿ(68) ಸುಫಾರಿ ನೀಡಿದವನಾಗಿದ್ದು, ಸುಫಾರಿ ಪಡೆದು ಹತ್ಯೆಗೈದ ರೌಡಿ ಕವಳನ ಗ್ಯಾಂಗ್ ನಲ್ಲಿದ್ದವನು ಎನ್ನಲಾದ ಬೆಂಗಳೂರು ಉಪ್ಪಾರಹಳ್ಳಿ ನಿವಾಸಿ ಬಿ.ವಿ.ಆದರ್ಶ್, ಆನೆಕಲ್ ಟೌನ್ ಮರಿಯಪ್ಪ ಲೇಔಟ್ ನ ಜಿ.ಕೆ.ಮನೋಜ್ ಕುಮಾರ್, ಬನಶಂಕರಿ 3ನೇ ಹಂತದ ನಿವಾಸಿ ಆರ್.ಕೇಶವಮೂರ್ತಿ, ಅತ್ತಿಬೆಲೆ ಹೋಬಳಿ, ಬೊಮ್ಮಸಂದ್ರ ಗ್ರಾಮದ ಪಿ.ಜಗದೀಶ್, ಆನೇಕಲ್ ಟೌನ್ ಗೋಪಿ ಲೇಔಟ್ ನ ಕೆ.ವಿನಯ್, ಜೆ.ಪಿ.ನಗರ 1ನೇ ಫೇಸ್ ನಿವಾಸಿ ಎ.ರಾಜೇಶ್, ಬಿದರಹಳ್ಳಿ ಹೋಬಳಿ ಚಿಕ್ಕಗುಚ್ಚ ಗ್ರಾಮದ ಸಿ.ಆರ್.ಮುರಳಿಧರ್ ಬಂಧಿತ ಆರೋಪಿಗಳು.

ರಿಯಲ್ ಎಸ್ಟೇಟ್ ಉದ್ಯಮಿ ಕೇಶವಮೂರ್ತಿ  ಕನಕಪುರ ತಾಲೂಕು ಹಾರೋಹಳ್ಳಿ ಗ್ರಾಮದ ರಂಗನಾಥ ಬಡಾವಣೆಯ ನಿವಾಸಿ ರತ್ನಮ್ಮ (45)  ಎಂಬಾಕೆಯೊಂದಿಗೆ ಕಳೆದ 15 ವರ್ಷಗಳಿಂದ ಸಂಬಂಧ ಹೊಂದಿದ್ದನು.  ಈಕೆ ಗಂಡನನ್ನು ತೊರೆದು ಮಗಳೊಂದಿಗೆ ಹಾರೋಹಳ್ಳಿಯಲ್ಲಿ ಮನೆ ಮಾಡಿಕೊಂಡು ಬದುಕು ಸಾಗಿಸುತ್ತಿದ್ದಳು. ಕೇಶವಮೂರ್ತಿ ಪರಿಚಯದ ಬಳಿಕ ಆತನೇ ಈಕೆಯ ಬೇಕು ಬೇಡಗಳನ್ನು ತೀರಿಸಿಕೊಂಡಿದ್ದನು. ಈ ನಡುವೆ ರತ್ನಮ್ಮ ಆತನಿಗೆ ಹೆಚ್ಚಿನ ಹಣಕ್ಕೆ ಬೇಡಿಕೆಯಿಡುತ್ತಿದ್ದಳಲ್ಲದೆ, ಐಷಾರಾಮಿ ಜೀವನವನ್ನು ಬಯಸಿದ್ದಳು.

ಶ್ರೀಮಂತನಾಗಿದ್ದ ಕೇಶವಮೂತರ್ತಿಯ ಮಗ ಅಮೇರಿಕಾದಲ್ಲಿದ್ದು ಅವನಿಗೆ ಮುಂದಿನ ಜೂನ್ ನಲ್ಲಿ ಮದುವೆ ನಿಶ್ಚಯವಾಗಿತ್ತು. ಈ ವಿಚಾರ ತಿಳಿದ ರತ್ನಮ್ಮ ನನಗೆ ಹಣ ಬೇಕು ಕೊಡದಿದ್ದರೆ, ನಿನ್ನ ಮಗನ ಮದುವೆಗೆ ಬಂದು ನನ್ನ ನಿನ್ನ ಸಂಬಂಧವನ್ನು ಬಿಚ್ಚಿಡುತ್ತೇನೆ ಎಂದು ಬ್ಲಾಕ್ ಮೇಲ್ ಮಾಡತೊಡಗಿದ್ದಳು. ಇದರಿಂದ ಭಯಗೊಂಡ ಕೇಶವಮೂರ್ತಿ ಅವಳು ಕೇಳಿದಷ್ಟು ಹಣ ಕೊಡಲಾಗದೆ ಅವಳನ್ನೇ ಮುಗಿಸಿಬಿಟ್ಟರೆ ನೆಮ್ಮದಿಯಾಗಿರಬಹುದೆಂದು ಆಲೋಚಿಸಿ ರೌಡಿ ಕವಳ ಗ್ಯಾಂಗ್ ನ ಆದರ್ಶ್ ನನ್ನು ಸಂಪರ್ಕಿಸಿ 10 ಲಕ್ಷ ರೂ.ಗೆ ಡೀಲ್ ಕುದುರಿಸಿದ್ದನು.

ಸುಫಾರಿ ಪಡೆದ ಗ್ಯಾಂಗ್  ರತ್ನಮ್ಮಳನ್ನು ಸಂಪರ್ಕಿಸಿ ನಿನಗೆ ಹಣಕೊಡಿಸುವುದಾಗಿ ಹೇಳಿ ಕಳೆದ ಮಾರ್ಚ್ 6ರಂದು ಕಾರೊಂದರಲ್ಲಿ ಆನೇಕಲ್ ಗೆ ಕರೆದೊಯ್ದು, ಕಾರಿನಲ್ಲೇ ಆಕೆಯ ಕುತ್ತಿಗೆಗೆ ಹಗ್ಗ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿ ಬಳಿಕ ಶವವನ್ನು ತಮಿಳುನಾಡಿನ ತಳಿ ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡಕೋಡಿಹಳ್ಳಿ ಗ್ರಾಮದ ಬಳಿಯ ನಿರ್ಜನ ಪ್ರದೇಶದ ನೀಲಗಿರಿ ತೋಪಿನಲ್ಲಿ ಎಸೆದು ಪರಾರಿಯಾಗಿದ್ದರು.

ಕಾಣೆಯಾದ ರತ್ನಮ್ಮಳ ಬಗ್ಗೆ ಆಕೆಯ ಸಂಬಂಧಿಕರು ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಈ ಬಗ್ಗೆ ಪೊಲೀಸರು ಹುಡುಕಾಟ ನಡೆಸಿದ ಸಂದರ್ಭದಲ್ಲಿ ಸುಫಾರಿ ಕೊಟ್ಟಿರುವ ವಿಚಾರ  ಗೊತ್ತಾಗಿದೆ. ಈ ಪ್ರಕರಣವನ್ನು ಬೇಧಿಸಿದ ಹಾರೋಹಳ್ಳಿ ಪೊಲೀಸರು ಆರೋಪಿಗಳನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ್ದ ಒಂದು ಎ. ಸ್ಟಾರ್ ಕಾರ್ ಹಾಗೂ ಇನೋವಾ ಕಾರ್ ಮತ್ತು ಹಗ್ಗ ಇತ್ಯಾದಿ ವಸ್ತುಗಳನ್ನು ಅಮಾನತ್ತು ಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ  ಡಿವೈಎಸ್ಪಿ ಎಂ.ಕೆ.ತಮ್ಮಯ್ಯ, ಹಾರೋಹಳ್ಳೀ ಸಿಪಿಐ ಬಿ.ಎನ್.ಶ್ರೀನಿವಾಸ್, ಪಿಎಸ್ ಕೆ.ಎ.ಅನಂತ ರಾಮ್, ಎ.ಎಸ್.ಐ ಮರೀಗೌಡ, ಹೆಚ್ಸಿ ದುರ್ಗೇಗೌಡ, ಹೆಚ್ಸಿ ಅನಂತ್ ಕುಮಾರ್, ಹೆಚ್ಸಿ ಪ್ರಭುಸ್ವಾಮಿ ಪಿಸಿ ಲೋಕೇಶ್, ಎಪಿಸಿ ಕಾರ್ತಿಕ್ ಪಾಲ್ಗೊಂಡಿದ್ದು, ಎಸ್ಪಿ ಬಿ.ರಮೇಶ್  ಅಭಿನಂದಿಸಿದ್ದಾರೆ.

See also  ಹೊರವರ್ತುಲ ರಸ್ತೆ ಪ್ರಯಾಣಿಕರಿಗೆ ವಾಯುಮಾಲಿನ್ಯದ ಆಪತ್ತು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು