News Kannada
Friday, October 07 2022

ಬೆಂಗಳೂರು ನಗರ

ನಲ್ಲಿ ದುರಸ್ತಿ ಮಾಡದೆ ನೀರು ಪೋಲು! - 1 min read

Photo Credit :

ನಲ್ಲಿ ದುರಸ್ತಿ ಮಾಡದೆ ನೀರು ಪೋಲು!

ಮಂಡ್ಯ: ನೀರಿಗಾಗಿ ಎಲ್ಲೆಡೆ ಹಾಹಾಕಾರ ಎದ್ದಿದೆ. ಮಂಡ್ಯ ಸೇರಿದಂತೆ ಹಲವು ನಗರಗಳಿಗೆ ನೀರು ಒದಗಿಸುವ ಕೆಆರ್ ಎಸ್ ಜಲಾಶಯದಲ್ಲಿ ದಿನದಿಂದ ದಿನಕ್ಕೆ ನೀರಿನ ಮಟ್ಟ ಕುಗ್ಗುತ್ತಿದೆ.

ಎಲ್ಲಿ ನೋಡಿದರಲ್ಲಿ ನೀರಿಗಾಗಿ ಸರತಿ ಸಾಲಿನಲ್ಲಿ ಕೊಡ ಹಿಡಿದು ನಿಂತ ಮಹಿಳೆಯರು, ಪುರುಷರು ಕಾಣಿಸಿಕೊಳ್ಳುತ್ತಿದ್ದರೆ, ಮತ್ತೊಂದೆಡೆ ಸೈಕಲ್ ಬೈಕ್ ನಲ್ಲಿ ಕಿ.ಮೀ. ದೂರದಿಂದ ನೀರನ್ನು ತರುವ ದೃಶ್ಯಗಳು ಕಾಣಿಸುತ್ತಿವೆ.ಕಳೆದ ಮುಂಗಾರಿನಲ್ಲಿ ಮಳೆ ಸಮರ್ಪಕವಾಗಿ ಬಾರದ ಕಾರಣದಿಂದ ಕೆಆರ್ ಎಸ್ ಜಲಾಶಯ ಭರ್ತಿಯಾಗಿರಲಿಲ್ಲ. ಹೀಗಾಗಿ ಈ ಬಾರಿ ನೀರಿಗೆ ಹಾಹಾಕಾರ ಬಂದಿರುವುದಂತು ಸತ್ಯ. ಹೀಗಾಗಿ ಎಲ್ಲೆಡೆ ಸಮರ್ಪಕವಾಗಿ ನೀರು ಸರಬರಾಜು ಮಾಡುವುದೇ ಕಷ್ಟವಾಗಿದೆ.

ಹಳ್ಳಿ ಪ್ರದೇಶಗಳಲ್ಲಿ ನೀರಿಗಾಗಿ ಈಗಲೂ ಪರದಾಟ ತಪ್ಪಿಲ್ಲ. ಅಂತರ್ಜಲದ ಕೊರತೆಯಿಂದಾಗಿ ಬೋರ್ವೆಲ್ ಗಳಲ್ಲಿ ನೀರೇ ಬಾರದಂತಾಗಿದೆ. ಹೀಗಿರುವಾಗ ಮಂಡ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಆವರಣದಲ್ಲಿರುವ ನಲ್ಲಿಯಲ್ಲಿ ಕುಡಿಯುವ ನೀರು ಪೋಲಾಗುತ್ತಿರುವುದು ಕಂಡು ಬರುತ್ತಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ನಲ್ಲಿಯಲ್ಲಿ ನೀರು ಪೋಲಾಗಲು ದುರಸ್ತಿಯಾಗಿರುವುದೇ ಕಾರಣವಾಗಿದೆ. ಇದನ್ನು ಸಂಬಂಧಿಸಿದವರು ದುರಸ್ತಿ ಮಾಡಿದರೆ ನೀರು ಪೋಲಾಗುವುದನ್ನು ತಪ್ಪಿಸಬಹುದಿತ್ತು. ಆದರೆ ದುರಸ್ತಿ ಮಾಡಲು ಯಾರೂ ಮುಂದಾಗದ ಕಾರಣದಿಂದಾಗಿ ನೀರು ಪೋಲಾಗುತ್ತಿದೆ. ಇನ್ನು ಮುಂದೆಯಾದರೂ ಇದರತ್ತ ಗಮನಹರಿಸುವರೇ ಎಂಬುದನ್ನು ಕಾದು ನೋಡಬೇಕಾಗಿದೆ.

See also  ಕರ್ನಾಟಕದಲ್ಲಿ ಇಂದು 2,258 ಕೋವಿಡ್‌ ಪ್ರಕರಣ ಪತ್ತೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು