ಬೆಂಗಳೂರು: ತಮಿಳು ನಟ ಸತ್ಯರಾಜ್ ಕಾವೇರಿ ಮತ್ತು ಕನ್ನಡಿಗರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು, ಈ ಬಗ್ಗೆ ಸತ್ಯರಾಜ್ ಕ್ಷಮೆ ಕೇಳಬೇಕು, ಇಲ್ಲವಾದರೇ ಏಪ್ರಿಲ್ 28ರಂದು ಕರ್ನಾಟಕ ಬಂದ್ ಮಾಡುವುದಾಗಿ ಕನ್ನಡಪರ ಸಂಘಟನೆಗಳು ಎಚ್ಚರಿಸಿದೆ.
ನಟ ಸತ್ಯರಾಜ್ ಹುಚ್ಚನ ರೀತಿ ಮಾತನಾಡಿದ್ದಾರೆ. ನಮ್ಮ ಹೋರಾಟ ಏನಿದ್ರೂ ಸತ್ಯರಾಜ್ ವಿರುದ್ಧ ಮಾತ್ರ ಬಹಿರಂಗ ಕ್ಷಮೆಯಾಚಿಸದ ಹೊರತು ರಾಜ್ಯದಲ್ಲಿ ಬಾಹುಬಲಿ-2 ರಿಲೀಸ್ ಗೆ ಅವಕಾಶ ನೀಡುವುದಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಾಟಾಳ್ ನಾಗರಾಜ್ ಹೇಳಿದ್ದಾರೆ.
ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್ ವರೆಗೆ ಏಪ್ರಿಲ್ 28ರಂದು ರಾಲಿ ನಡೆಸಲಾಗುವುದು ಎಂದು ವಾಟಾಳ್ ತಿಳಿಸಿದ್ದು, ಬಾಹುಬಲಿ ಚಿತ್ರದ ನಿರ್ಮಾಪಕರೇ ವಿತರಣೆ ಮಾಡುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ವಿತರಣೆ ಹಕ್ಕು ಇದುವರೆಗೂ ಯಾರೂ ತೆಗೆದುಕೊಂಡಿಲ್ಲ. ಅದಕ್ಕಾಗಿ ವಿತರಕರಿಗೆ ಧನ್ಯವಾದ ತಿಳಿಸುವುದಾಗಿ ಸಾರಾ ಗೋವಿಂದು ತಿಳಿಸಿದ್ದಾರೆ. ಚಲನಚಿತ್ರ ವಾಣಿಜ್ಯ ಮಂಡಳಿಯನ್ನು ಈ ವಿಷಯದ ಸಂಬಂಧವಾಗಿ ಇದುವರೆಗೂ ನಿರ್ಮಾಪಕರು ಸಂಪರ್ಕಿಸಿಲ್ಲ, ಈ ಸಂಬಂಧ ಯಾರೂ ಮಾತುಕತೆ ನಡೆಸಿಲ್ಲ ಎಂದು ತಿಳಿಸಿದ್ದಾರೆ.