News Kannada
Tuesday, September 27 2022

ಬೆಂಗಳೂರು ನಗರ

ಬದುಕಿ ಬರಲಿಲ್ಲ ಕಾವೇರಿ… - 1 min read

Photo Credit :

ಬದುಕಿ ಬರಲಿಲ್ಲ ಕಾವೇರಿ…

ಅಥಣಿ: ಮೂರು ದಿನಗಳ ನಿರಂತರ ಹೋರಾಟ, ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಸತತ ಪರಿಶ್ರಮ ಬಾಲಕಿ ಕಾವೇರಿಯನ್ನು ಬದುಕಿಸಲಿಲ್ಲ. ಅಥಣಿ ತಾಲೂಕಿನ ಝುಂಜರವಾಡ ಗ್ರಾಮದ ಆರು ವರ್ಷದ ಬಾಲಕಿ ಕಾವೇರಿ ಕೊಳವೆ ಬಾವಿಗೆ ಬಿದ್ದು 3 ದಿನವಾಗಿತ್ತು, ಆಕೆಯನ್ನು ಬದುಕಿಸಲು ಸತತ 56 ಗಂಟೆಗಳ ಕಾರ್ಯಾಚರಣೆ ನಡೆಸಲಾಯಿತಾದರೂ ಪ್ರಯೋಜನವಾಗಲಿಲ್ಲ, 28 ಅಡಿ ಆಳಕ್ಕೆ ಬಿದ್ದಿದ್ದ ಕಾವೇರಿ ದುರಂತ ಅಂತ್ಯ ಕಂಡಿದ್ದಾಳೆ.

ಶವ ಕೊಳೆತಿರೋದ್ರಿಂದ ಅರ್ಧ ಶವ ಸಿಕ್ಕಿದೆ. ಇನ್ನರ್ಧ ಶವ ಸಿಗಬೇಕಿದೆ. ಅರ್ಧ ದೇಹ ಸಿಕ್ಕಿರೋದನ್ನ ರಕ್ಷಣಾ ಸಿಬ್ಬಂದಿ ಖಚಿತಪಡಿಸಿದ್ದಾರೆ. ಶವ ಕೊಳೆತು ವಾಸನೆ ಬರ್ತಿದೆ. ಸಾವಿನ ಬಗ್ಗೆ ವೈದ್ಯರೇ ಖಚಿತಪಡಿಸಬೇಕು ಅಂತಾ ಹೇಳಿದ್ದಾರೆ. ಪೂರ್ತಿಯಾಗಿ ಶವ ಸಿಕ್ಕ ಬಳಿಕ ಅಧಿಕೃತ ಘೋಷಣೆ ಮಾಡೋ ಸಾಧ್ಯತೆ ಇದೆ ಎಂದು ಐಜಿ ರಾಮಚಂದ್ರ ರಾವ್ ಹೇಳಿದ್ದಾರೆ.

ಸಂಜೆಯೇ ಕಾವೇರಿ ಬದುಕಿರೋದು ಅನುಮಾನ ಅಂತಾ ಪರೋಕ್ಷವಾಗಿ ಜಿಲ್ಲಾಧಿಕಾರಿ ಜಯರಾಮ್ ಹೇಳಿದ್ದರು. ಬಾಲಕಿಯ ಯಾವುದೇ ಚಲನವಲನ ಇಲ್ಲ. ಕಾರ್ಯಾಚರಣೆ ಸ್ಥಳದಲ್ಲಿ ಕೊಳೆತ ವಾಸನೆ ಬರ್ತಿದೆ ಅಂತಾ ಕೂಡಾ ಹೇಳಲಾಗಿತ್ತು. ಆದರೂ ದೊಡ್ಡ ಆಸೆಯೊಂದಿಗೆ ಕಾರ್ಯಾಚರಣೆ ಮುಂದುವರಿದಿತ್ತು.

ಏಪ್ರಿಲ್ 22 ರಂದು ತನ್ನ ಸೋದರ ಸಂಬಂಧಿಗಳೊಂದಿಗೆ ಕಟ್ಟಿಗೆ ಆಯಲು ಹೋಗಿದ್ದ ಕಾವೇರಿ ಆಕಸ್ಮಿಕವಾಗಿ ತೆರೆದ ಕೊಳವೆ ಬಾವಿಗೆ ಬಿದ್ದಿದ್ದಳು, ಕಳೆದ ಮೂರು ದಿನಗಳಿಂದ ಆಕೆಯನ್ನು ರಕ್ಷಿಸಲು ಕಾರ್ಯಾಚರಣೆ ನಡೆದಿತ್ತು, ಸೋಮವಾರ ಮಧ್ಯರಾತ್ರಿ ರಕ್ಷಣಾ ತಂಡ ಕಾವೇರಿಯ ಮೃತ ದೇಹವನ್ನು ಹೊರತೆಗೆಯಲಾಯಿತು. ಈ ವೇಳೆ. ಕಾವೇರಿ ಪೋಷಕರ, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಎನ್ಡಿಆರ್ ಎಫ್ ಸಿಬ್ಬಂದಿ, ಎಂಎಲ್ಐಆರ್ ಸಿ ಸಿಬ್ಬಂದಿಗಳಿಂದ ಕಾರ್ಯಾಚರಣೆ ಶನಿವಾರ ರಾತ್ರಿಯಿಂದಲೇ ನಡೆದಿತ್ತು. ಅವಸರ ಮಾಡಿದ್ರೆ ಬಾಲಕಿ ಕಾವೇರಿ ದೇಹಕ್ಕೆ ತೊಂದರೆಯಾಗುವ ಸಾಧ್ಯತೆಗಳಿರುವ ನಿಟ್ಟಿನಲ್ಲಿ ಈವರೆಗೂ ಸೂಕ್ಷ್ಮವಾಗಿ ಕಾರ್ಯಾಚರಣೆ ಮಾಡಿದ್ದೇವು ಅಂತಾ ಹಟ್ಟಿ ಚಿನ್ನದ ಗಣಿ ಸಿಬ್ಬಂದಿ ಹೇಳಿದ್ದಾರೆ.

ನಮ್ಗೆ ಆಗಿರೋ ಆದ ಪರಿಸ್ಥಿತಿ ಬೇರೆಯವರಿಗೆ ಆಗೋದು ಬೇಡ, ಪರಿಹಾರವೂ ನಮ್ಗೆ ಬೇಡ. ರಾಜ್ಯದಲ್ಲಿ ಇರುವ ಎಲ್ಲಾ ತೆರೆದ ಬೋರ್ವೆಲ್ಗಳನ್ನ ಮುಚ್ಚಿಸಿ ಅಂತಾ ಕಾವೇರಿ ತಾಯಿ ಸವಿತಾ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದು, ನಮಗೆ ಪರಿಹಾರ ಬೇಡ ಏನೂ ಬೇಡ ಗೋಳಿಟ್ಟಿದ್ದಾರೆ.

ಅಜಿತ್ ಮಾದರ ಮತ್ತು ಸವಿತಾ  ದಂಪತಿ ಕೂಲಿ ಅರಸಿ ಬಾಗಲಕೋಟೆ ಜಿಲ್ಲೆಯಿಂದ ಇಲ್ಲಿಗೆ ಬಂದಿದ್ದರು. ಬೇಸಿಗೆ ಆರಂಭವಾದಾಗಿನಿಂದ ಕೆಲಸ ಸಿಗುವುದೂ ಕಡಿಮೆ ಆಗಿದೆ. ಹೀಗಾಗಿ ಅಜಿತ್ ಮಾದರ ಕೂಲಿ ಹುಡುಕಿಕೊಂಡು, ಸಿಕ್ಕಲ್ಲಿ ಕೆಲಸಕ್ಕೆ ಹೋಗುತ್ತಿದ್ದರು. ಅಂತೆಯೇ ಬೆಳಗಾವಿಯಲ್ಲಿ ಬಂದು ಕುಟುಂಬ ನೆಲೆಸಿತ್ತು. ಹೆಂಡತಿ ಸವಿತಾ ಮಕ್ಕಳನ್ನು ನೋಡಿಕೊಂಡು ಮನೆಯಲ್ಲಿದ್ದರು. ಶನಿವಾರ ಸಂಜೆ ತೋಟದ ವಸತಿಯಲ್ಲಿ ದೊಡ್ಡ ಮಗಳು ಅನ್ನಪೂರ್ಣಾಳನ್ನು ಬಿಟ್ಟು, ಚಿಕ್ಕವರಾದ ಕಾವೇರಿ ಹಾಗೂ ಪವನ್ನನ್ನು ಕರೆದುಕೊಂಡು ಕಟ್ಟಿಗೆ ಆಯಲು ಬಂದಿದ್ದರು. ಈ ಹೊತ್ತಿನಲ್ಲಿ ಮಕ್ಕಳಿಬ್ಬರೂ ಹೊಲದ ದಾರಿಯ ಪಕ್ಕದಲ್ಲಿ ಆಡುತ್ತಿದ್ದರು. ಮೂರ್ನಾಲ್ಕು ದಿನಗಳ ಹಿಂದಷ್ಟೇ ಹೊಲವನ್ನು ಗಳೆ ಹೊಡೆದಿದ್ದರಿಂದ ದೊಡ್ಡ ದೊಡ್ಡ ಮಣ್ಣಿನ ಹೆಂಟೆಗಳು ಎದ್ದು ನಿಂತಿದ್ದವು. ಆ ಹೆಂಟೆಗಳ ನಡುವೆಯೇ ತೆರೆದ ಕೊಳವೆ ಬಾವಿ ಇರುವುದು ಮಕ್ಕಳಿಗೆ ತಿಳಿದಿರಲಿಲ್ಲ. ಆಡುತ್ತ ಹೋದ ಕಾವೇರಿ ಕಾಲು ಜಾರಿ ಬಿದ್ದಿದ್ದಳು. ಇದನ್ನು ಕಂಡ ಆಕೆಯ ತಮ್ಮ ಪವನ ಗಾಬರಿಯಿಂದ ಚೀರಿದ್ದ. ಮಗನ ದನಿ ಕೇಳುತ್ತಿದ್ದಂತೆಯೇ ಅಲ್ಲಿಗೆ ಧಾವಿಸಿದ ತಾಯಿಯ ಮುಂದೆ `ಅಕ್ಕ ಇದರಾಗ ಬಿದ್ಲು’ ಎಂದು ಪವನ್ ಕುಣಿಯೊಂದನ್ನು ತೋರಿಸಿದ್ದಾನೆ. ಕೂಡಲೇ ಮಗಳ ರಕ್ಷಣೆಗೆ ಮುಂದಾದ ಸವಿತಾ, ಹಗ್ಗವೊಂದನ್ನು ಬಿಟ್ಟು ಕಾವೇರಿಯನ್ನು ಮೇಲಕ್ಕೆ ಎತ್ತುವ ಪ್ರಯತ್ನ ಮಾಡಿದ್ದರು.

See also  ಇಂದು ರಾಜ್ಯದಲ್ಲಿ ೧೭೮ ಕೊರೊನಾ ಪ್ರಕರಣ ದೃಢ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು