News Kannada
Tuesday, October 04 2022

ಬೆಂಗಳೂರು ನಗರ

ಮೊದಲನೇ ಮದುವೆ ವಿಷಯ ಮುಚ್ಚಿಟ್ಟ ಪತ್ನಿ: ಗರ್ಭಿಣಿಯನ್ನು ಕೊಂದು ಶವ ಪೊದೆಗೆ ಎಸೆದ ಪತಿ! - 1 min read

Photo Credit :

ಮೊದಲನೇ ಮದುವೆ ವಿಷಯ ಮುಚ್ಚಿಟ್ಟ ಪತ್ನಿ: ಗರ್ಭಿಣಿಯನ್ನು ಕೊಂದು ಶವ ಪೊದೆಗೆ ಎಸೆದ ಪತಿ!

ಬೆಂಗಳೂರು: ಪತಿ ಅಜಯ್‌ ದಾಸ್‌ ತನ್ನ ಪತ್ನಿಯಾದ ಗರ್ಭಿಣಿ ಜುನಾಲಿ ಗೂಲಾ (22) ಎಂಬುವರನ್ನು ಕೊಂದು ಶವವನ್ನು ಪೊದೆಗೆ ಎಸೆದಿದ್ದ ಘಟನೆ ಎಲೆಕ್ಟ್ರಾನಿಕ್‌ ಸಿಟಿ ಬಳಿಯ ಬಸವಪುರದಲ್ಲಿ ನಡೆದಿದೆ.

ಅಜಯ್‌ ಮನೆಗೆ ಬೀಗ ಹಾಕಿಕೊಂಡು ನಾಲ್ಕು ದಿನಗಳ ಹಿಂದಷ್ಟೇ ನಾಪತ್ತೆಯಾಗಿದ್ದು, ಬಸವಪುರದಲ್ಲಿ ವಾಸವಿದ್ದ ಅಸ್ಸಾಂನ ಈ ದಂಪತಿ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡಿಕೊಂಡಿದ್ದರು.

ಅಸ್ಸಾಂನ ಈ ದಂಪತಿ ವಾಸವಿದ್ದ ಮನೆಯ ಸಮೀಪದ ಪೊದೆಯಲ್ಲಿ ಶನಿವಾರ ದುರ್ವಾಸನೆ ಬರುತ್ತಿತ್ತು. ಅನುಮಾನಗೊಂಡ ಸ್ಥಳೀಯರು ಮಾಹಿತಿ ಕೊಟ್ಟಿದ್ದರು. ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಪ್ಲಾಸ್ಟಿಕ್‌ ಚೀಲದಲ್ಲಿ ಜುನಾಲಿ ಅವರ ಶವ ಪತ್ತೆಯಾಗಿತ್ತು.

ಜುನಾಲಿ ಹಾಗೂ ಅಜಯ್‌ ಒಂದೇ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿಯೇ ಪರಿಚಯವಾಗಿದ್ದ ಅವರಿಬ್ಬರು ಪರಸ್ಪರ ಪ್ರೀತಿಸಿ ಆರು ತಿಂಗಳ ಹಿಂದಷ್ಟೇ ಮದುವೆ ಆಗಿದ್ದರು. ಇತ್ತೀಚೆಗೆ ಹೊಟ್ಟೆನೋವಿನಿಂದ ಬಳಲುತ್ತಿದ್ದ ಜುನಾಲಿ ಅವರನ್ನು ಆರೋಪಿಯು ವೈದ್ಯರ ಬಳಿ ಕರೆದೊಯ್ದಿದ್ದ. ಪರೀಕ್ಷಿಸಿದ ವೈದ್ಯರು, ನೀವು ಗರ್ಭಿಣಿಯಾಗಿದ್ದೀರಿ. ಇದು ಎಷ್ಟನೇ ಮಗು ಎಂದು ಕೇಳಿದ್ದರು. ಅದಕ್ಕೆ ಮಹಿಳೆಯು ಸಮರ್ಪಕವಾಗಿ ಉತ್ತರ ನೀಡಿರಲಿಲ್ಲ. ಅದರಿಂದ ಪತಿಗೆ ಅನುಮಾನ ಬಂದಿತ್ತು. ಮನೆಯಲ್ಲಿ ಅದೇ ವಿಷಯವಾಗಿ ಜಗಳ ಶುರುವಾಗಿದ್ದು, ಈ ಸಂದರ್ಭ ಜುನಾಲಿ, ನನಗೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ ಎಂದಿದ್ದರು.ಮೊದಲನೇ ಮದುವೆ ವಿಷಯ ಮುಚ್ಚಿಟ್ಟು, ನನ್ನೊಂದಿಗೆ ಎರಡನೇ ಮದುವೆಯಾಗಿದ್ದಿಯಾ ಎಂದು ಕೋಪಗೊಂಡ ಆರೋಪಿಯು ಆಕೆಯ  ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಪೋಲೀಸರು ತಿಳಿಸಿದ್ದಾರೆ.

ಆರೋಪಿಯು ಪ್ಲಾಸ್ಟಿಕ್ ಚೀಲದಲ್ಲಿ ಶವವನ್ನು ಹಾಕಿ ಪೊದೆಯಲ್ಲಿ ಎಸೆದು ಅಸ್ಸಾಂಗೆ ಹೋಗಿ ತಲೆಮರೆಸಿಕೊಂಡಿದ್ದ. ವಿಶೇಷ ತಂಡವು ಅಲ್ಲಿಗೆ ಹೋಗಿ ಈತನನ್ನು ಬಂಧಿಸಿ ಕರೆತಂದಿದೆ ಎಂದು ತನಿಖಾಧಿಕಾರಿ ಹೇಳಿದ್ದಾರೆ. 

See also  ಹಲಾಲ್ ಮಾಂಸ ಬಹಿಷ್ಕರಿಸಿ ಅಂತ ಹೇಳುವ ಹಕ್ಕು ನಮಗಿದೆ; ಸಿ.ಟಿ ರವಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು