News Kannada
Tuesday, October 04 2022

ಬೆಂಗಳೂರು ನಗರ

ಕೈ ವಿದಾಯಕ್ಕೆ ಕಾರಣ ತೆರದಿಟ್ಟ ವಿಶ್ವನಾಥ್! - 1 min read

Photo Credit :

ಕೈ ವಿದಾಯಕ್ಕೆ ಕಾರಣ ತೆರದಿಟ್ಟ ವಿಶ್ವನಾಥ್!

ಬೆಂಗಳೂರು: ಸುಮಾರು ನಾಲ್ಕು ದಶಕಗಳ ಕಾಲ ಪಕ್ಷದಲ್ಲಿ ಕಾರ್ಯ ನಿರ್ವಹಿಸಿ ಶಾಸಕನಾಗಿ, ಸಚಿವನಾಗಿ, ಸಂಸದನಾಗಿ ರಾಜಕೀಯ ಬದುಕಿನಲ್ಲಿ ತನ್ನದೇ ಛಾಪು ಮೂಡಿಸಿದ್ದ ಮಾಜಿ ಸಂಸದ, ಕಾಂಗ್ರೆಸ್ ಮುಖಂಡ ಎಚ್.ವಿಶ್ವನಾಥ್ ತುಂಬಿದ ಕಣ್ಣು, ಭಾರವಾದ ಹೃದಯ, ರಾಜಕೀಯ ಬದುಕು ಕೊಟ್ಟ ಪಕ್ಷ ಬಿಟ್ಟು ಹೋಗಲೇ ಬೇಕಲ್ವಾ ಎಂಬ ನೋವಿನಿಂದಲೇ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಆ ನೋವಿನಿಂದ ಅವರು ಹೊರ ಬಂದಿಲ್ಲ.

ಇಷ್ಟಕ್ಕೂ ಕಳೆದ ನಾಲ್ಕು ದಶಕಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠೆ ಮತ್ತು ನಿಸ್ವಾರ್ಥತೆಯಿಂದ ಸೇವೆ ಸಲ್ಲಿಸಿ ಪ್ರಮುಖ ನಾಯಕರ ಪಂಕ್ತಿಯಲ್ಲಿ ಗುರುತಿಸಿಕೊಂಡಿದ್ದ ಅವರು ಪಕ್ಷವನ್ನು ಬಿಟ್ಟು ಹೊರ ಬಂದಿದ್ದಾದರೂ ಏಕೆ ಎಂಬ ಕುತೂಹಲ ಎಲ್ಲರನ್ನೂ ಕಾಡುತ್ತಿತ್ತು. ಈ ಪ್ರಶ್ನೆಗಳನ್ನು ಅವರ ಮುಂದೆ ಕೇಳಿದಾಗಲೆಲ್ಲ ಉಪಾಯದಿಂದಲೇ ಜಾರಿಕೊಳ್ಳುತ್ತಿದ್ದರು. ಕೊನೆಗೂ ಅದಕ್ಕೆ ಕಾರಣಗಳನ್ನು ಹೇಳಿದ್ದಾರೆ. ಅಷ್ಟೇ ಅಲ್ಲದೆ ಕಾಂಗ್ರೆಸ್ ನಲ್ಲಾದ ಅವಮಾನ, ನೋವು ಎಲ್ಲವನ್ನೂ ತೆರೆದಿಟ್ಟಿದ್ದಾರೆ.

ನನಗೆ ಕಾಂಗ್ರೆಸ್ ಪಕ್ಷ ಎಲ್ಲವನ್ನು  ಕೊಟ್ಟಿದೆ. ಅದು ನನಗೆ ತಾಯಿ ಇದ್ದಹಾಗೆ. ಕೊನೆಯ ಉಸಿರಿರುವ ತನಕ ಆ ಪಕ್ಷದ ಬಗ್ಗೆ ಅಭಿಮಾನ ನನ್ನಲ್ಲಿ ಇದ್ದೇ ಇರುತ್ತದೆ. ನಾನು ಇವತ್ತಿಗೂ ಕಾಂಗ್ರೆಸ್ ಪಕ್ಷದ ಋಣದಲ್ಲಿದ್ದೇನೆ. ಆದರೆ, ಆ ಪಕ್ಷದಲ್ಲಿ ನನಗೆ ಅನಾಥ ಪ್ರಜ್ಞೆ ಕಾಡುತ್ತಿದೆ ಹೀಗಾಗಿಯೇ ಅದರಿಂದ ಹೊರಬರುವಂತಾಗಿದೆ.
ಕೆಲವರು ಕಾಂಗ್ರೆಸ್ ಪಕ್ಷದ ಸಂಸ್ಕೃತಿಯನ್ನೇ ರೂಪಾಂತರ ಮಾಡಿದ್ದಾರೆ. ಇದನ್ನು ಪ್ರಶ್ನೆ ಮಾಡಿದ ನನ್ನನ್ನು ಶತ್ರುವನ್ನಾಗಿ ನೋಡಲಾಯಿತು. ಅಲ್ಲಿ ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯ ದಮನವಾಯಿತು. ನನಗೆ ಯಾವುದೇ ಸ್ಥಾನಮಾನ ಗೌರವ ದೊರೆಯಲಿಲ್ಲ. ಹಾಗೆಂದು ಅದಕ್ಕಾಗಿ ನಾನು ರಾಜೀನಾಮೆ ನೀಡುತ್ತಿಲ್ಲ.
ಕಾಂಗ್ರೆಸ್ ನ ಮೂಲ ಆಶಯಕ್ಕೆ ಧಕ್ಕೆಯಾಗಿದೆ ಎಂಬ ಕಾರಣಕ್ಕೆ ಆ ಪಕ್ಷದಿಂದ ಹೊರ ಬರುತ್ತಿದ್ದೇನೆ. ಕಾಂಗ್ರೆಸ್ ಪಕ್ಷ ನನಗೆ ಹಲವಾರು ಅವಕಾಶಗಳನ್ನು ಕೊಟ್ಟಿದೆ. ಕನ್ನಡ ಮತ್ತು ಸಂಸ್ಕೃತಿ ಸಚಿವನಾಗಿ, ಯುವಜನ ಮತ್ತು ಕ್ರಿಡಾ ಇಲಾಖೆ ಹಾಗೂ ಶಿಕ್ಷಣ ಸಚಿವನಾಗಿ ಸಮರ್ಥವಾಗಿ ಕೆಲಸ ಮಾಡಿದ್ದೇನೆ. ಆದರೆ, ನಾನು ಎಂದೂ ಅಧಿಕಾರ ಅನುಭವಿಸಿಲ್ಲ ಬದಲಾಗಿ ಅಧಿಕಾರ ನಿರ್ವಹಿಸಿದ್ದೇನೆ.

ನಾಲ್ಕು ದಶಕಗಳಲ್ಲಿ ನಿಷ್ಠೆ ವಿಶ್ವಾಸದಿಂದ ರಾಜಕೀಯದ ಪ್ರಥಮ ಪಾಠಗಳನ್ನು ಕಾಂಗ್ರೆಸ್ ಪಕ್ಷದಲ್ಲಿ ಕಲಿತಿದ್ದು, ಕಾಂಗ್ರೆಸ್ ಎಂಬ ರಾಷ್ಟ್ರೀಯ ಪಕ್ಷ ನನ್ನನ್ನು ತಿದ್ದಿ, ತೀಡಿ ಅಧಿಕಾರ ಕೊಟ್ಟು ಸಶಕ್ತನನ್ನಾಗಿ ಮಾಡಿರುವುದನ್ನು ನಾನೆಂದೂ ಮರೆಯಲಾರೆ. ಇಂದಿರಾಗಾಂಧಿ, ದೇವರಾಜು ಅರಸು ಅವರ ನಾಯಕತ್ವ ವಿಚಾರಧಾರೆ, ಬಿ.ಬಸವಲಿಂಗಪ್ಪನವರ  ನೇರ ನುಡಿ, ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಬದುಕಿನಲ್ಲಿ ಅಳವಡಿಸಿಕೊಂಡಿದ್ದೇನೆ.

ಇತ್ತೀಚೆಗೆ ನಡೆದ ನಂಜನಗೂಡು, ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ಇವರನ್ನು ನನ್ನನ್ನು ದೂರವಿಟ್ಟು, ಪ್ರಚಾರದ ಸಂದರ್ಭದಲ್ಲಿ ಭಾವಚಿತ್ರ ತೆಗೆಯಿಸಿ ಅವಮಾನ ಮಾಡಲಾಯಿತು. ಎಐಸಿಸಿ ಉಸ್ತುವಾರಿ ಕರೆದ ಮೈಸೂರು ಜಿಲ್ಲಾ ಮುಖಂಡರ ಸಭೆಗೆ ಆಹ್ವಾನಿಸದೆ ದೂರವಿಡಲಾಯಿತು. ಕಾಂಗ್ರೆಸ್ ಯಾವುದೇ ಜಿಲ್ಲಾ ಸಭೆಗಳಿಗೆ ಆಹ್ವಾನಿಸಬಾರದೆಂದು ತೀರ್ಮಾನಿಸಲಾಯಿತು. ಗುರುತರ ಆರೋಪ ಹೊತ್ತವರನ್ನು ಕೂಡ ಸಹನೆಯಿಂದ ಕಂಡ ಪಕ್ಷ ನನ್ನನ್ನು  ಯಾವ ಆರೋಪಕ್ಕೆ ದಂಡಿಸಿತು ಎಂಬುದು ನನಗೆ ಗೊತ್ತಿಲ್ಲ. ಆದರೂ ಪರ್ವಾಗಿಲ್ಲ. ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಪ್ರವಾಸ ಮಾಡಿ ಬೆಂಬಲಿಗರನ್ನು ಭೇಟಿ ಮಾಡಿ ನಾನು ಎಂಬುದನ್ನು ತೋರಿಸಿಕೊಡುವೆ ಎಂದು ಅವರು ಹೇಳಿದ್ದಾರೆ.

See also  ಸೈನ್ಸ್ ಕಾಂಗ್ರೆಸ್ ಸಮ್ಮೇಳನಕ್ಕೆ ಪ್ರಧಾನಿ ಮೋದಿ ಚಾಲನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು