News Kannada
Saturday, October 01 2022

ಬೆಂಗಳೂರು ನಗರ

ಗೃಹಖಾತೆ ಯಾರಿಗೆ ನೀಡುತ್ತಾರೆ ಸಿಎಂ? - 1 min read

Photo Credit :

ಗೃಹಖಾತೆ ಯಾರಿಗೆ ನೀಡುತ್ತಾರೆ ಸಿಎಂ?

ಬೆಂಗಳೂರು: ಡಾ. ಜಿ.ಪರಮೇಶ್ವರ್ ಅವರು ತಾವು ಹೊಂದಿದ್ದ ಗ್ರಹಖಾತೆಗೆ ರಾಜೀನಾಮೆ ನೀಡಿದ ಬಳಿಕ ಈ ಖಾತೆಯನ್ನು ಮುಖ್ಯ ಮಂತ್ರಿ ಸಿದ್ಧರಾಮಯ್ಯ ಅವರು ಯಾರಿಗೆ ನೀಡುತ್ತಾರೆ ಎಂಬುದು ಕುತೂಹಲಕಾರಿಯಾಗಿಯೇ ಉಳಿದು ಹೋಗಿದೆ. ಸದ್ಯ ಈ ಖಾತೆಯನ್ನು ಯಾರಿಗೆ ನೀಡಿದರೆ ಸೂಕ್ತ ಎಂಬುದರ ಬಗ್ಗೆ ಗೊಂದಲಕ್ಕೀಡಾಗಿರುವ ಸಿಎಂ ಸೂಕ್ತವಾಗಿ ನಿರ್ವಹಣೆ ಮಾಡುವ ಚಾಕ್ಯತೆ ಹೊಂದಿರುವ ನಾಯಕರಿಗೆ ನೀಡಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ಡಿವೈಎಸ್ಪಿ ಗಣಪತಿ ಅವರ ಆತ್ಮಹತ್ಯೆ ಪ್ರಕರಣದ ಸಂದರ್ಭ ಕೆ.ಜೆ.ಜಾರ್ಜ್ ಅವರಿಂದ ಪ್ರತಿಪಕ್ಷಗಳು ಬಲತ್ಕಾರವಾಗಿ ರಾಜೀನಾಮೆಯನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದವು. ಅವರ ರಾಜೀನಾಮೇ ಬಳಿಕ ಗೃಹಮಂತ್ರಿ ಸ್ಥಾನವನ್ನು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ವಹಿಸಿಕೊಂಡಿದ್ದರು. ಇದೀಗ ಹೈಕಮಾಂಡ್ ಡಾ.ಜಿ.ಪರಮೇಶ್ವರ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಸಿರುವುದರಿಂದ ಗೃಹ ಖಾತೆಗೆ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಆ ಖಾತೆಯನ್ನು ಯಾರಿಗೆ ನೀಡುವುದು ಎಂಬ ಗೊಂದಲದಲ್ಲೇ ಸಚಿವ ಸಂಪುಟ ವಿಸ್ತರಣೆಯನ್ನು ಮುಂದೂಡಿಕೊಂಡು ಬಂದಿರುವ  ಸಿಎಂ ಸಿದ್ದರಾಮಯ್ಯ ಜುಲೈ ಎರಡನೇ ವಾರದಲ್ಲಿ ಸಂಪುಟ ವಿಸ್ತರಣೆ ಮಾಡುತ್ತಾರೆ ಎನ್ನಲಾಗುತ್ತಿದೆ. ಈ ವೇಳೆ ಗೃಹಖಾತೆಯನ್ನು ಹಿರಿಯ ಸಚಿವ ರಾಮಲಿಂಗಾ ರೆಡ್ಡಿ  ಅವರಿಗೆ ನೀಡಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಅದರ ಜತೆಯಲ್ಲೇ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ಹೆಸರು ಕೂಡ ತಳಕು ಹಾಕಿಕೊಂಡಿದೆ.

ಇವರಿಬ್ಬರಲ್ಲಿ ಯಾರಿಗಾದರೊಬ್ಬರಿಗೆ ಗೃಹಖಾತೆ ಖಚಿತವಾಗಲಿದೆ. ಮುಂದಿನ ದಿನಗಳು ಚುನಾವಣೆಯ ದಿನಗಳಾಗಿರುವುದರಿಂದ ಎಲ್ಲವನ್ನೂ ತೂಗಿ ಅಳಿದು ನೋಡುತ್ತಿರುವ ಸಿಎಂ ಯಾರಿಗೆ ಯಾವ ಖಾತೆ ನೀಡಿದರೆ ಅವರು ಸಮರ್ಪಕ ನಿರ್ವಹಿಸುತ್ತಾರೆ. ಅಷ್ಟೇ ಅಲ್ಲ ಅದರಿಂದ ಮುಂದಿನ ಚುನಾವಣೆಗೆ ಯಾವ ರೀತಿಯ ಅನುಕೂಲವಾಗಲಿದೆ ಎಂಬುದೆಲ್ಲವನ್ನು ತೂಗಿ ಅಳೆಯುತ್ತಿರುವ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಕೊನೆಗೂ ರಾಮಲಿಂಗಾ ರೆಡ್ಡಿ ಮತ್ತು ಸಂತೋಷ್ ಲಾಡ್ ಅವರ ಹೆಸರನ್ನು ಅಂತಿಮಗೊಳಿಸಿದ್ದು, ಹೈಕಮಾಂಡ್ ಮುಂದೆ ನೀಡಲಿದ್ದು, ಹೈಕಮಾಂಡ್ ಆಜ್ಞೆಯಂತೆ ಖಾತೆಯನ್ನು ನೀಡಲಿದ್ದಾರೆ. ಅಕ್ರಮ ಅದಿರು ರಫ್ತು ಆರೋಪದ ನಿಟ್ಟಿನಲ್ಲಿ ಈ ಹಿಂದೆ ಸಂತೋಷ್ ಲಾಡ್ ವಾರ್ತಾ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಾದರೂ ಬಳಿಕ ಸಂಪುಟ ವಿಸ್ತರಣೆಯಾದಾಗ ಅವರಿಗೆ ಕಾರ್ಮಿಕ ಸಚಿವ ಖಾತೆಯನ್ನು ನೀಡಲಾಗಿತ್ತು. ಇವರಿಬ್ಬರಲ್ಲಿ ರಾಮಲಿಂಗಾರೆಡ್ಡಿ ಅವರಿಗೆ ಗೃಹಖಾತೆ ಸಿಗುವುದು ಖಚಿತವಾಗಲಿದೆ. ಇದೇ ವೇಳೆ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇರುವುದರಿಂದ ಆಕಾಂಕ್ಷಿ ಶಾಸಕರು ಸಚಿವ ಸ್ಥಾನಕ್ಕಾಗಿ ದೆಹಲಿಯಲ್ಲಿ ಲಾಬಿ ನಡೆಸುತ್ತಿರುವುದಂತು ಸತ್ಯ.

See also  ಪಾಟೀಲ್, ವಿನಯ್ ಕುಲಕರ್ಣಿಯನ್ನು ಪಕ್ಷಕ್ಕೆ ಸೇರಿಸುವ ಪ್ರಸ್ತಾವವಿಲ್ಲ: ಸಿ.ಟಿ.ರವಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು