News Kannada
Thursday, October 06 2022

ಬೆಂಗಳೂರು ನಗರ

ಸಿಎಂ ಸಿದ್ಧರಾಮಯ್ಯ ಮೂರು ದಿನದೊಳಗೆ ಕ್ಷಮೆ ಕೇಳಬೇಕು: ಬಿ ಎಸ್ ವೈ - 1 min read

Photo Credit :

ಸಿಎಂ ಸಿದ್ಧರಾಮಯ್ಯ ಮೂರು ದಿನದೊಳಗೆ ಕ್ಷಮೆ ಕೇಳಬೇಕು: ಬಿ ಎಸ್ ವೈ

ಬೆಂಗಳೂರು: ವಿಸ್ತಾರಕ ಯೋಜನೆಯಡಿ ಬಿಜೆಪಿಯ ಮನೆ ಮನೆ ಸಂಪರ್ಕ ಅಭಿಯಾನ ಆರಂಭಗೊಂಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಗರದ ಶಿವಾಜಿನಗರ ವಿಧಾನಸಭೆ ಕ್ಷೇತ್ರದ ಸಂಪಂಗಿ ರಾಮನಗರದಿಂದ ಅಭಿಯಾನ ಪ್ರಾರಂಭಿಸಲಾಗಿದೆ. ಸಂಪಂಗಿ ರಾಮನಗರದ ದೇವಾಂಗ ಸಮುದಾಯದ ನಾಯಕ ನಟರಾಜ್ ನಿವಾಸದಲ್ಲಿ ಉಪಹಾರ ಸೇವನೆ ಮೂಲಕ ಮನೆ ಮನೆ ಸಂಪರ್ಕ ಅಭಿಯಾನಕ್ಕೆ ಯಡಿಯೂರಪ್ಪ ಚಾಲನೆ ನೀಡಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿನಿಂದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಜನ್ಮ ಶತಾಬ್ದಿ ಪ್ರಯುಕ್ತ ಮನೆ ಸಂಪರ್ಕ ಅಭಿಯಾನ ನಡೆಯುತ್ತದೆ. ನಾನೂ ಕೂಡ 15 ದಿನ ಪ್ರಚಾರದಲ್ಲಿ ಭಾಗಿಯಾಗುತ್ತಿದ್ದೇನೆ. ಬಿಜೆಪಿಯನ್ನು ಬೆಂಬಲಿಸಲು ಮನೆ ಮನೆಗೆ ತೆರಳಿ ಜನರನ್ನು ಕೇಳಿಕೊಳ್ಳುತ್ತೇನೆ ಎಂದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಿರುದ್ಧ ಹಾಸನದಲ್ಲಿ ಹಗುರವಾಗಿ ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ತಮ್ಮ ಹೇಳಿಕೆ ಹಿಂಪಡೆದು ಕ್ಷಮಾಪಣೆ ಕೇಳಬೇಕು. ಇಲ್ಲದಿದ್ದಲ್ಲಿ ಸಿಎಂ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಬೇಕಾಗಲಿದೆ ಎಂದು ಯಡಿಯೂರಪ್ಪ ಎಚ್ಚರಿಕೆ ನೀಡಿದರು. ಅಮಿತ್ ಶಾ ಹಾಗೂ ನನ್ನ ಬಗ್ಗೆ ಸಿಎಂ ಸಿದ್ದರಾಮಯ್ಯ ಸಲ್ಲದ ಹೇಳಿಕೆ ನೀಡಿದ್ದಾರೆ. ಅಮಿತ್ ಶಾ ಇಲ್ಲದಿದ್ದರೆ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇಲ್ಲದೆ ಇದ್ದಿದ್ದರೆ ಯಡಿಯೂರಪ್ಪ ಜೈಲಿನಲ್ಲಿ ಇರುತ್ತಿದ್ದರು ಎಂದಿದ್ದಾರೆ. ಲಾ ಓದಿದ ಸಿಎಂ ಈ ತರಹ ಹೇಳಿಕೆ ನೀಡಿರುವುದು ಸರಿಯಲ್ಲ. ಹೈಕೋರ್ಟ್, ಸುಪ್ರಿಂಕೋರ್ಟ್ ತೀರ್ಪನ್ನು ಪ್ರಶ್ನಿಸೋದು ಸರಿಯಲ್ಲ. ಸಿದ್ದರಾಮಯ್ಯ ಮೂರು ದಿನಗಳಲ್ಲಿ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು. ಇಲ್ಲದೆ ಹೋದರೆ ಸಿದ್ದರಾಮಯ್ಯ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಸಿಎಂ ವಿರುದ್ಧ ಯಡಿಯೂರಪ್ಪ ಗರಂ ಆದರು.

ಈ ವೇಳೆ ಸಂಪಂಗಿ ರಾಮನಗರದ ದೇವಾಂಗ ಮುಖಂಡ ನಟರಾಜ್ ಮನೆ ಮುಂದೆ ಘೋಷಣೆ ಕೂಗಿದ ಜೀವನ್ ಎನ್ನುವ ಕಾರ್ಯಕರ್ತ ತಮ್ಮ ಮನೆಗೂ ಬಂದು ಉಪಹಾರ ಸೇವಿಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪಗೆ ಒತ್ತಾಯಿಸಿದ ಘಟನೆ ನಡೆಯಿತು. ಬಿ ಎಸ್ ವೈ ನಮ್ಮ ಮನೆಗೂ ಬರಬೇಕು. ನಾವು ಕ್ರಿಶ್ಚಿಯನ್ ನಮ್ಮ ಮನೆಗೆ ಬಂದು ಬಿ ಎಸ್ ವೈ ಟೀ ಕುಡಿದು ಹೋಗಲಿ. ನಮಗೆ ಸಂತೋಷವಾಗುತ್ತದೆ. ಎಲ್ಲ ಹಿಂದುಳಿದ ವರ್ಗದ ಜನರು ಬಿಜೆಪಿಗೆ ಮತ ಹಾಕುತ್ತಾರೆ. ನಮ್ಮ ಮನೆಗೆ ಬಿ ಎಸ್ ವೈ ಬರಲೇಬೇಕು ಎಂದು ಘೋಷಣೆ ಕೂಗಿದ. ಇದಕ್ಕೆ ನಸುನಗುತ್ತಾ ಬಿ ಎಸ್ ವೈ ಕೈ ಸನ್ನೆ ಮೂಲಕ ಸಮ್ಮತಿ ಸೂಚಿಸಿ ಮುನ್ನಡೆದರು.

 

See also  ಸರಳ ಬಹುಮತದತ್ತ ಬಿಜೆಪಿ ದಾಪುಗಾಲು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು