News Kannada
Wednesday, November 30 2022

ಬೆಂಗಳೂರು ನಗರ

ವಿಂಗಡಣೆಯ ಶಿಫ್ಟ್ ಕೆಲಸದಿಂದ ಮೆಟ್ರೋ ರೈಲು ನಿರ್ವಾಹಕರಿಗೆ ತಲೆನೋವು - 1 min read

Photo Credit :

ವಿಂಗಡಣೆಯ ಶಿಫ್ಟ್ ಕೆಲಸದಿಂದ ಮೆಟ್ರೋ ರೈಲು ನಿರ್ವಾಹಕರಿಗೆ ತಲೆನೋವು

ಬೆಂಗಳೂರು: ಸ್ಪ್ಲಿಟ್ ರೋಸ್ಟರ್ ಸಿಸ್ಟಮ್ ನ್ನು ಬೈಯಪ್ಪನಹಳ್ಳಿ ಮೆಟ್ರೋ ಡಿಪೋಗೆ ಸಂಬಂಧಿಸಿದ 100 ರೈಲು ನಿರ್ವಾಹಕರಿಗೆ ಜಾರಿಗೆ ತರಲಾಗಿದ್ದು ಇದು ಸಿಬ್ಬಂದಿಗಳಿಗೆ ತಲೆನೋವು ತಂದಿದೆ.

ಸಿಬ್ಬಂದಿಗಳಿಗೆ ಬೆಳಗ್ಗೆ ಮತ್ತು ಸಾಯಂಕಾಲ 8 ಗಂಟೆಗಳ ಶಿಫ್ಟ್ ಕೆಲಸದಿಂದಾಗಿ ವಿಶ್ರಾಂತಿಗಳಿಗೆ ಸಮಯ ಸಾಕಾಗುತ್ತಿಲ್ಲ ಹಾಗೂ ಬೇರೆ ಕೆಲಸಗಳಿಗೆ ಅವರಿಗೆ ದಿನವಿಡೀ ಸಮಯ ಹೊಂದಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂಬುದು ಸಿಬ್ಬಂದಿಗಳ ಸಮಸ್ಯೆ.

ಕಳೆದ ಫೆಬ್ರವರಿಯಲ್ಲಿ ಸ್ಪ್ಲಿಟ್ ರೋಸ್ಟರ್ ಸಿಸ್ಟಮ್ ನ್ನು ಪರ್ಪಲ್ ಲೈನ್ ನಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಜಾರಿಗೆ ತರಲಾಗಿದ್ದು, ನಿರ್ವಾಹಕರಿಗೆ ವಿವಿಧ ಶಿಫ್ಟ್ ಗಳಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸಲಾಯಿತು. ನಿರ್ವಾಹಕರು ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಮತ್ತು ಸಾಯಂಕಾಲ 4 ಗಂಟೆಯಿಂದ 8 ಗಂಟೆಯವರೆಗೆ ಕೆಲಸ ಮಾಡಬೇಕು. ಅಥವಾ ಬೆಳಗ್ಗೆ 7 ಗಂಟೆಯಿಂದ 11 ಗಂಟೆಯವರೆಗೆ ಅಥವಾ ಸಾಯಂಕಾಲ 4 ಗಂಟೆಯಿಂದ 8 ಗಂಟೆಯವರೆಗೆ ಅಥವಾ ಬೆಳಗ್ಗೆ 5 ಗಂಟೆಯಿಂದ 8 ಗಂಟೆಯವರೆಗೆ ಮತ್ತು ಸಾಯಂಕಾಲ 4 ಗಂಟೆಯಿಂದ 9 ಗಂಟೆಯವರೆಗೆ ಇರುತ್ತದೆ. ಈ ಶಿಫ್ಟ್ ಅವಧಿಯನ್ನು ಸಿಬ್ಬಂದಿ ಬೆಳಗ್ಗೆ 5 ಗಂಟೆಯಿಂದ ರಾತ್ರಿ 11 ಗಂಟೆಯೊಳಗೆ ಯಾವಾಗ ಬೇಕಾದರೂ ಮಾಡಬಹುದು. ಇದರಲ್ಲಿ ರೈಲು ನಿರ್ವಾಹಕರಿಗೆ ಯಾವುದೇ ವಿನಾಯ್ತಿಯಿಲ್ಲ. ಆದರೆ ಇದು ಸಿಬ್ಬಂದಿಗೆ ಅನುಕೂಲವಾಗುತ್ತಿಲ್ಲವಂತೆ.

ಮೊದಲಿಗೆ ಇದನ್ನು ಪ್ರಾಯೋಗಿಕ ಮಾದರಿಯಲ್ಲಿ ಜಾರಿಗೆ ತಂದು ಸ್ವಲ್ಪ ಸಮಯದವರೆಗೆ ಇರುತ್ತದೆ ಎಂದು ಹೇಳಲಾಗಿದ್ದು, ಈ ನಿಯಮ ಜಾರಿಗೆ ಬಂದು 5 ತಿಂಗಳುಗಳು ಕಳೆದರೂ ಅದನ್ನು ತೆಗೆಯುವ ಬಗ್ಗೆ ಯಾವುದೇ ಸೂಚನೆ ಕಂಡುಬಂದಿಲ್ಲ. ಆರಂಭದಲ್ಲಿ ಈ ಪರ್ಪಲ್ ಲೈನ್ ನ ರೈಲಿಗೆ 19 ಮಂದಿ ನಿರ್ವಾಹಕರಿದ್ದರು. ಅವರ ಸಂಖ್ಯೆಯನ್ನು ಇದೀಗ ಕಡಿಮೆ ಮಾಡಲಾಗಿದೆ.

ವಾರಾಂತ್ಯಗಳಲ್ಲಿ ಪ್ರತಿ ಶಿಫ್ಟ್ ನಲ್ಲಿ 7 ಮಂದಿ ನಿರ್ವಾಹಕರನ್ನು ಮತ್ತು ವಾರಗಳಲ್ಲಿ 3 ಮಂದಿಯನ್ನು ನಿಯೋಜಿಸಲಾಗುತ್ತದೆ. ಆದರೆ ಈ ರೋಸ್ಟರ್ ವ್ಯವಸ್ಥೆ ತಮಗೆ ಅನಾನುಕೂಲವಾಗಿದೆ ಎಂದು ಸಿಬ್ಬಂದಿ ಆರೋಪಿಸುತ್ತಿದ್ದು, ಈ ಬಗ್ಗೆ ಕಾರ್ಮಿಕ ಆಯುಕ್ತರಿಗೆ ದೂರು ಸಹ ನೀಡಲಾಗಿದೆ.

 

See also  ಮಗಳನ್ನೇ ಹನಿ ಟ್ರ್ಯಾಪ್ ಗೆ ಬಳಸುತ್ತಿದ್ದ ದಂಪತಿಯ ಸೆರೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು