News Kannada
Friday, December 02 2022

ಬೆಂಗಳೂರು ನಗರ

ಕನ್ನಡ ಧ್ವಜದ ಬಗ್ಗೆ ವಾಟಾಳ್ ನಾಗರಾಜ್ ಹೇಳಿದ್ದೇನು?

Photo Credit :

ಕನ್ನಡ ಧ್ವಜದ ಬಗ್ಗೆ ವಾಟಾಳ್ ನಾಗರಾಜ್ ಹೇಳಿದ್ದೇನು?

ಬೆಂಗಳೂರು: ರಾಜ್ಯದಲ್ಲಿ ಕನ್ನಡ ಧ್ವಜದ ಬಗ್ಗೆ ಚರ್ಚೆಗಳು ಆರಂಭವಾಗಿದ್ದು, ಬೇಕು, ಬೇಡಗಳ ನಡುವೆ ವಾದ ವಿವಾದಗಳು ನಡೆಯುತ್ತಿವೆ. ಈ ನಡುವೆ ಪ್ರತಿಕ್ರಿಯೆ ನೀಡಿರುವ ಕನ್ನಡ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಕನ್ನಡ ಧ್ವಜದ ಕುರಿತು ಒಂದಿಷ್ಟು ಮಾಹಿತಿ ನೀಡಿದ್ದಾರೆ.

ಅವರು ಏನು ಹೇಳಿದ್ದಾರೆ ಎಂಬುದು ಇಲ್ಲಿದೆ. ಕನ್ನಡ ಧ್ವಜದ ಬಗ್ಗೆ ಮಾತನಾಡುತ್ತಿರುವವರಿಗೆ ಧ್ವಜದ ಇತಿಹಾಸ ಮತ್ತು ವಾಸ್ತವಾಂಶಗಳು ಗೊತ್ತಿಲ್ಲ. 1966ರ ಆ.21ರಂದು ಮೊದಲ ಬಾರಿಗೆ ಬೆಂಗಳೂರಿನ ಕೆಂಪೇಗೌಡ ರಸ್ತೆಯಲ್ಲಿರುವ ಕೈಗಾರಿಕೆ ಮತ್ತು ವಾಣಿಜ್ಯ ಮಂಡಳಿಯಲ್ಲಿ ರಾಷ್ಟ್ರಧ್ವಜದ ಜತೆಯಲ್ಲೇ ಕನ್ನಡ ಧ್ವಜವನ್ನು ಹಾರಿಸಲಾಯಿತು.

ಮೊದಲು ವಿನ್ಯಾಸಗೊಳಿಸಿದ ಧ್ವಜ ಹಳದಿ ಬಣ್ಣದಿಂದ ಕೂಡಿದ್ದು, ಅದರಲ್ಲಿ ಕೆಂಪು ಗೆರೆಯಿಂದ ಕರ್ನಾಟಕ ನಕ್ಷೆ ಬಿಡಿಸಲಾಗಿತ್ತು. ನಕ್ಷೆಯೊಳಗೆ ಹಸಿರು ಬಣ್ಣದಲ್ಲಿ ಏಳು ದಳಗಳ ಪೈರನ್ನು ಚಿತ್ರಿಸಲಾಗಿತ್ತು. ಕರ್ನಾಟಕ ಏಳು ಸಾಮಂತ ರಾಜ್ಯಗಳ ಒಕ್ಕೂಟವಾಗಿದ್ದರಿಂದ ಆ ಹಸಿರು ಪೈರಿನಲ್ಲಿ ಏಳು ದಳಗಳನ್ನು ಸೇರಿಸಲಾಗಿತ್ತು. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿಂದಾಗಿ ಮೊದಲ ಬಾರಿ ರೂಪಿಸಿದ್ದ ಧ್ವಜವನ್ನು ಬದಲಾವಣೆ ಮಾಡಿ 1967ರಲ್ಲಿ ಹಳದಿ-ಕೆಂಪು ಮಿಶ್ರಿತ ಧ್ವಜ ರೂಪಿಸಲಾಯಿತು.

ಆ ಧ್ವಜದ ಮಧ್ಯದಲ್ಲಿ ಭುವನೇಶ್ವರಿ ತಾಯಿಯ ಚಿತ್ರವನ್ನು ಬಿಡಿಸಲಾಗಿದೆ. ಈ ಧ್ವಜ ಕಳೆದ 50 ವರ್ಷಗಳಿಂದ ಜನರ ಮನ್ನಣೆಗೆ ಪಾತ್ರವಾಗಿದೆ. ಡಾ.ರಾಜ್ ಕುಮಾರ್ ಸೇರಿದಂತೆ ಎಲ್ಲ ಕಲಾವಿದರ, ರಂಗಭೂಮಿ, ಗಣ್ಯರ, ಸಾಹಿತಿಗಳ ಮೆಚ್ಚುಗೆ ಗಳಿಸಿದೆ. ಕಳೆದ 25 ವರ್ಷಗಳಿಂದ ಸರ್ಕಾರ ಅಧಿಕೃತವಾಗಿ ಆಚರಿಸುತ್ತಿರುವ ಕನ್ನಡ ರಾಜ್ಯೋತ್ಸವದಲ್ಲೂ ಇದೇ ಧ್ವಜ ಬಳಸಲಾಗುತ್ತಿದೆ. ಸದಾನಂದಗೌಡ ಅವರು ಮುಖ್ಯಮಂತ್ರಿಯಾಗಿದ್ದಾಗ ಕನ್ನಡದ ಧ್ವಜಕ್ಕೆ ಕಾನೂನಿನ ಮಾನ್ಯತೆ ನೀಡಿದ್ದಾರೆ. ಇಷ್ಟೆಲ್ಲ ಆದ ನಂತರ ರಾಜ್ಯ ಸರ್ಕಾರ ಈಗ ಧ್ವಜದ ವಿನ್ಯಾಸ ಬದಲಾವಣೆಗೆ ಸಾಹಿತಿ ಪಾಟೀಲ ಪುಟ್ಟಪ್ಪ ಹೇಳಿದರು ಎಂಬ ಕಾರಣಕ್ಕೆ ಸಮಿತಿ ರಚಿಸಲಾಗಿದೆ. ಈ ಸಮಿತಿ ಅನಗತ್ಯವಾಗಿದೆ ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರ ಈಗ ಧ್ವಜ ವಿನ್ಯಾಸ ಬದಲಾವಣೆಗೆ ಸಮಿತಿ ರಚಿಸುವ ಮೊದಲು 57 ವರ್ಷಗಳಿಂದ ಕನ್ನಡಕ್ಕಾಗಿ ಹೋರಾಟ ನಡೆಸುತ್ತಿರುವ ನನ್ನನ್ನಾಗಲಿ, ಇತರೆ ಸಂಘಟನೆ ಜತೆಯಲ್ಲಾಗಲಿ ಚರ್ಚೆ ನಡೆಸಿಲ್ಲ. ಇನ್ನು ಈ ಸಮಿತಿಗೆ ಯಾವ ಮಾನದಂಡ ನೀಡಲಾಗಿದೆ ಎಂಬುದನ್ನು ಬಹಿರಂಗಪಡಿಸಿಲ್ಲ. ಕನಿಷ್ಠ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಶಾಸನ ಸಭೆಯಲ್ಲಿ ಅಂಗೀಕಾರ ಪಡೆದಿದ್ದರೆ ಸಮಿತಿಗೆ ಸಾಂವಿಧಾನಿಕ ಅಧಿಕಾರವಾದರೂ ಇರುತ್ತಿತ್ತು. ಈಗ ರಚಿಸಿರುವ ಸಮಿತಿಗೆ ಯಾವುದೇ ಮಾನ್ಯತೆ ಇಲ್ಲ ಎಂದು ಹೇಳಿದ ಅವರು, ಯಾವುದೇ ಕಾಲಕ್ಕೂ ಹಳದಿ-ಕೆಂಪು ಮಿಶ್ರಿತ ಧ್ವಜದಲ್ಲಿ ಸಣ್ಣ ಗೆರೆಯನ್ನೂ ಬದಲಾಯಿಸಬಾರದು. ಈ ಕುರಿತು ಜನಜಾಗೃತಿ ಮೂಡಿಸಲು ಜು.29ರಂದು ರಾಜ್ಯದಲ್ಲಿ ಬಾವುಟ ಸಮ್ಮೇಳನ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.

See also  ನಿರ್ಮಾಣ ಹಂತದ ಕಟ್ಟಡದಲ್ಲಿ ಭಾರಿ ಅಗ್ನಿ ಅವಘಡ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು