News Kannada
Sunday, November 27 2022

ಬೆಂಗಳೂರು ನಗರ

ಬೆಂಗಳೂರು ಪೊಲೀಸ್ ಠಾಣೆಗಳಿಗೆ ಪಿಂಕ್ ಹೊಯ್ಸಳ! - 1 min read

Photo Credit :

ಬೆಂಗಳೂರು ಪೊಲೀಸ್ ಠಾಣೆಗಳಿಗೆ ಪಿಂಕ್ ಹೊಯ್ಸಳ!

ಬೆಂಗಳೂರು: ನಗರ ಬೆಳೆದಂತೆಲ್ಲ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ ಮಾಡುವುದು ನಮ್ಮ ಆದ್ಯಕರ್ತವ್ಯವಾಗಿದ್ದು, ಅದಕ್ಕಾಗಿ ಪಿಂಕ್ ಹೊಯ್ಸಳ ವಾಹನಗಳನ್ನು ಪೊಲೀಸ್ ಇಲಾಖೆಗೆ ನೀಡಲಾಗುತ್ತಿದ್ದು, ಎಲ್ಲ ಠಾಣೆಗಳಿಗೂ ಒಂದು ವಾರದೊಳಗೆ ಪಿಂಕ್ ಹೊಯ್ಸಳ ವಾಹನ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ನಮ್ಮ 100 ಯೋಜನೆ ಜಾರಿಗೊಳಿಸಿದ್ದು, ದೂರು ನೀಡಿದ 15 ನಿಮಿಷದಲ್ಲೇ ಪೊಲೀಸರು ದೂರಿಗೆ ಸ್ಪಂದಿಸಿ ಪರಿಹಾರ ನೀಡಲಿದ್ದಾರೆ ಎಂದು ಹೇಳಿದ ಅವರು, ನಗರದಲ್ಲಿ ನಡೆಯುವ ಅಪರಾಧಗಳನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಲಾಗುವುದಾಗಿ ಹೇಳಿದರು.

ವಿಪಕ್ಷಗಳು ಮಾಡುವ ಆರೋಪ, ಆಕ್ಷೇಪಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ನಮ್ಮ ಸರ್ಕಾರ ಮಾಡಿರುವ ಅಭಿವೃದ್ದಿ ಕೆಲಸಗಳ ಬಗ್ಗೆ ಜನರ ತೀರ್ಮಾನಕ್ಕೆ ಬಿಡುತ್ತೇವೆ. ಕಾಮಾಲೆ ಕಣ್ಣಿರುವವರಿಗೆ ಕಾಣುವುದೆಲ್ಲ ಹಳದಿ ಎಂಬಂತೆ ವಿರೋಧ ಪಕ್ಷಗಳು ವರ್ತಿಸುತ್ತಿವೆ. ಅಭಿವೃದ್ದಿಗೆ ಅಡ್ಡಗಾಲು ಹಾಕುವುದನ್ನು ಕಾಯಕ ಮಾಡಿಕೊಂಡಿವೆ. ಇದರಿಂದ ಅಭಿವೃದ್ದಿ ಕುಂಠಿತವಾಗುತ್ತದೆಯೇ ಹೊರತು ಯಾವುದೇ ರೀತಿಯ ಲಾಭವಾಗುವುದಿಲ್ಲ.

ಇಂದಿರಾ ಕ್ಯಾಂಟೀನ್ ಸ್ಥಾಪನೆ ಕುರಿತು ಮಾಡಿರುವ ಆರೋಪ ಮಾನನಷ್ಟ ಮೊಕದ್ದಮೆಗೆ ಅರ್ಹವಾಗಿದೆ. ನಾನು ಕೂಡ ಒಬ್ಬ ವಕೀಲನಾಗಿ ಇದನ್ನು ಸಮರ್ಥಿಸುತ್ತೇನೆ. ಆದರೆ ಆರೋಪ ಮಾಡಿರುವವರ ವಿರುದ್ದ ಮಾನನಷ್ಟ ಮೊಕದ್ದಮೆ ದಾಖಲಿಸುವುದಿಲ್ಲ ಎಂದು ಹೇಳಿದರು.

ಬೆಂಗಳೂರು ವಿಶ್ವದಲ್ಲೇ ಕ್ರಿಯಾಶೀಲ ನಗರವಾಗಿ ಬೆಳೆಯುತ್ತಿದೆ. 240 ಚದುರ ಕಿ.ಮೀ ವಿಸ್ತೀರ್ಣವಿದ್ದ ಬೆಂಗಳೂರು 840 ಚದುರ ಕಿ.ಮೀ ವ್ಯಾಪ್ತಿಗೆ ವಿಸ್ತರಿಸಿದೆ. ನಗರದಲ್ಲಿ ಒಂದು ಕೋಟಿ 10 ಲಕ್ಷ ಜನಸಂಖ್ಯೆ ಇದ್ದು 67 ಲಕ್ಷ ವಾಹನಗಳಿವೆ. 47 ಲಕ್ಷ ದ್ವಿಚಕ್ರ ವಾಹನಗಳಿವೆ. ಜನಸಂಖ್ಯೆಗೆ ಅನುಗುವಣವಾಗಿ ಪರಿಸರ ಮಾಲಿನ್ಯ ತಡೆಗಟ್ಟಬೇಕು, ವಾಹನಗಳನ್ನು ನಿಯಂತ್ರಿಸಬೇಕಾಗಿದೆ ಎಂದರು.

See also  ಎಸ್.ಎಂ.ಕೃಷ್ಣಾ, ಬಿ.ಎಸ್.ಯಡಿಯೂರಪ್ಪರನ್ನು ಭೇಟಿಯಾದ ಸುಮಲತಾ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು