News Kannada
Tuesday, November 29 2022

ಬೆಂಗಳೂರು ನಗರ

ಸರ್ಕಾರಿ ಪದವಿ ಕಾಲೇಜುಗಳ ವೇಳಾಪಟ್ಟಿ ಮತ್ತೆ ಬದಲಾವಣೆ: ಹೊಸ ಸುತ್ತೋಲೆ - 1 min read

Photo Credit :

ಸರ್ಕಾರಿ ಪದವಿ ಕಾಲೇಜುಗಳ ವೇಳಾಪಟ್ಟಿ ಮತ್ತೆ ಬದಲಾವಣೆ: ಹೊಸ ಸುತ್ತೋಲೆ

ಬೆಂಗಳೂರು: ಆಗಸ್ಟ್ 1ರಿಂದ ಬೆಳಿಗ್ಗೆ 9ರಿಂದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ತರಗತಿ ಪ್ರಾರಂಭಿಸಲು ಶಿಕ್ಷಣ ಇಲಾಖೆ ಹೊಸ ಸುತ್ತೊಲೆಯನ್ನು ಹೊರಡಿಸಿದೆ. ಈ ಹಿಂದೆ ಬೆಳಗ್ಗೆ 8 ಗಂಟೆಯಿಂದಲೇ ತರಗತಿಗಳನ್ನು ಆರಂಭಿಸಬೇಕೆಂದು ಶಿಕ್ಷಣ ಇಲಾಖೆ ಸೂಚಿಸಿತ್ತು, ಆದರೆ ವಿದ್ಯಾರ್ಥಿಗಳು ಕಾಲೇಜು ಸಿಬ್ಬಂದಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ವೇಳಾ ಪಟ್ಟಿ ಬದಲಾವಣೆ ಮಾಡಿದೆ.ಇದರ ಪ್ರಕಾರ ಬೆಳಗ್ಗೆ 9ರಿಂದ ಕಾಲೇಜು ಪ್ರಾರಂಭವಾಗಲಿದೆ. ಆದರೆ ಈಗಾಗಲೇ ಎರಡು ಪಾಳಿಗಳಲ್ಲಿ ಕೆಲಸ ಮಾಡುತ್ತಿರುವ ಕಾಲೇಜುಗಳು ಬೆಳಗ್ಗೆ 8 ಗಂಟೆಗೆ ತರಗತಿಗಳನ್ನು ಆರಂಭಿಸಿದ್ದು ಆ ಕಾಲೇಜುಗಳಲ್ಲಿ ಇದೇ ವೇಳಾ ಪಟ್ಟಿ ಮುಂದುವರಿಯಲಿದೆ. ಮಲೆನಾಡು, ಕರಾವಳಿ ಹಾಗೂ ಗ್ರಾಮೀಣ ಭಾಗದಲ್ಲವಿ ಸಾರಿಗೆ ಸಂಪರ್ಕ ಸರಿಯಾಗಿಲ್ಲದ ಕಾರಣ ವಿದ್ಯಾರ್ಥಿಗಳಿಂದ ಆಕ್ಷೇಪ ಮತ್ತು ಪ್ರತಿಭಟನೆ ನಡೆಯುತ್ತಿದ್ದು. ಈ ಹಿನ್ನೆಲೆಯಲ್ಲಿ ಈ ಬದಲಾವಣೆ ಮಾಡಲಾಗಿದೆ.

ಕಾಲೇಜು ವೇಳಾ ಪಟ್ಟಿ  ಬದಲಾವಣೆಯಿಂದ ಕಾಲೇಜು ಪಠ್ಯೇತ್ತರ ಚಟುವಟಿಕೆಗಳಾದ ಎನ್‌ಎಸ್‌ಎಸ್‌, ಎನ್.ಸಿ.ಸಿ, ಕೌಶಲಾಭಿವೃದ್ಧಿ ತರಬೇತಿ, ವಿಶೇಷ ತರಗತಿಗಳು, ಕ್ರೀಡಾ ಚಟುವಟಿಕೆಗಳಲ್ಲಿ ಬದಲಾವಣೆ ತರಬಾರದು ಎಂದು ಸೂಚನೆ ನೀಡಿದೆ.

See also  ಉಕ್ರೇನಿನಿಂದ ವಾಪಸ್ ಬಂದ ವಿದ್ಯಾರ್ಥಿನಿಯರನ್ನು ಭೇಟಿಯಾದ ಸಚಿವ ಅಶ್ವತ್ಥ ನಾರಾಯಣ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು