News Kannada
Tuesday, December 06 2022

ಬೆಂಗಳೂರು ನಗರ

ಡಿಕೆಶಿ ವಿರುದ್ಧ ಕಾಂಗ್ರೆಸ್ನಿಂದಲೇ ಸಂಚು ನಡೆಯಿತಾ?

Photo Credit :

ಡಿಕೆಶಿ ವಿರುದ್ಧ ಕಾಂಗ್ರೆಸ್ನಿಂದಲೇ ಸಂಚು ನಡೆಯಿತಾ?

ಬೆಂಗಳೂರು: ರಾಜ್ಯ ಕಾಂಗ್ರೆಸ್ನಲ್ಲಿ ಅತ್ಯಂತ ಪ್ರಭಾವಿ ನಾಯಕರಾಗಿ ಬೆಳೆಯುತ್ತಿದ್ದ ಡಿ.ಕೆ.ಶಿವಕುಮಾರ್ ಅವರನ್ನು ಹಿಮ್ಮೆಟ್ಟಿಸಲು ಕಾಂಗ್ರೆಸ್ ನಾಯಕರೇ ಸಂಚು ರೂಪಿಸಿದ್ದರೆ ಎಂಬ ಅನುಮಾನಗಳು ಹರಿದಾಡತೊಡಗಿದ್ದು, ಇದರ ಬೆನ್ನಲ್ಲೇ ಡಿಕೆಶಿ ತಾಯಿ ಗೌರಮ್ಮ ಅವರು ಮಾಧ್ಯಮದವರ ಮುಂದೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧವೇ ಹರಿಹಾಯ್ದಿದ್ದು ಸಾಕ್ಷಿಯಾಗಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದ ಡಿ.ಕೆ.ಶಿವಕುಮಾರ್ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಯ ಪ್ರಬಲ ಸ್ಪರ್ಧಿಯಾಗಿದ್ದರು. ಕಾಂಗ್ರೆಸ್ ಹೈಕಮಾಂಡ್ ಡಿ.ಕೆ.ಶಿವಕುಮಾರ್ ಮೇಲೆ ಅಪಾರ ನಂಬಿಕೆ ಇಟ್ಟಿತ್ತು. ರಾಜ್ಯ ರಾಜಕಾರಣದಲ್ಲೂ ಪಕ್ಷ ಸಂಘಟನೆಯ ಯಾವುದೇ ಜವಾಬ್ದಾರಿ ಕೊಟ್ಟರೂ ಡಿ.ಕೆ.ಶಿವಕುಮಾರ್ ಅತ್ಯಂತ ಸಮರ್ಥ ಹಾಗೂ ದಕ್ಷವಾಗಿ ನಿಭಾಯಿಸುತ್ತಾರೆ ಎಂಬ ನಂಬಿಕೆ ಹೈಕಮಾಂಡ್ಗಿತ್ತು. ಇದು ಕಾಂಗ್ರೆಸ್ನ ಕೆಲವು ನಾಯಕರಿಗೆ ಬಿಸಿತುಪ್ಪವಾಗಿತ್ತು. ಹೀಗಾಗಿಯೇ ಹಣಿಯಲು ಮುಂದಾದರೇ ಎಂಬ ಅನುಮಾನಗಳು ಹುಟ್ಟತೊಡಗಿವೆ.

ಮೇಲ್ನೋಟಕ್ಕೆ ರಾಜಕೀಯ ದ್ವೇಷದಿಂದ ಬಿಜೆಪಿಯವರು ದಾಳಿ ನಡೆಸಲು ಕುಮ್ಮಕ್ಕು ನೀಡಿದ್ದಾರೆ ಎಂಬ ಮಾತುಗಳನ್ನು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಆದರೆ ಒಳಗೊಳಗೆ ಇತರೇ ನಾಯಕರಿಗೆ ಹಾಲು ಕುಡಿದಷ್ಟು ಸಂತೋಷವಾಗಿದೆ ಎಂದರೆ ತಪ್ಪಾಗಲಾರದು. ಕಾಂಗ್ರೆಸ್ನ ಬಹಳಷ್ಟು ನಾಯಕರಿಗೆ ಡಿಕೆಶಿ ಪ್ರತಿಸ್ಪರ್ಧಿಯಾಗಿದ್ದರು. ಒಂದು ವೇಳೆ ಐಟಿ ದಾಳಿ ನಡೆಯದೆ ಹೋಗಿದ್ದರೆ ಹೈಕಮಾಂಡ್ ಪಾಲಿಗೆ ಹೀರೋ ಆಗುವ ಎಲ್ಲ ಸಾಧ್ಯತೆಯಿತ್ತು. ಯಾವುದನ್ನು ಆಗಲ್ಲ ಎನ್ನದೆ ಎಲ್ಲವನ್ನು ಮುನ್ನುಗ್ಗಿ ಮಾಡುವ ನಾಯಕತ್ವ ಗುಣ ಅವರನ್ನು ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿ ಘೋಷಿಸುವ ವರೆಗೂ ಹೋಗುತ್ತೆ ಎಂಬುದು ಸ್ವಪಕ್ಷದ ನಾಯಕರಿಗೂ ಗೊತ್ತಿತ್ತು. ಹೀಗಾಗಿಯೇ ಒಂದಷ್ಟು ಮಂದಿ ಪಿತೂರಿ ನಡೆಸಿದ್ದಾರೆ ಎನ್ನುವುದು ರಾಜಕೀಯವಾಗಿ ಕೇಳಿ ಬರುತ್ತಿರುವ ಮಾತಾಗಿದೆ.

ಈ ಹಿಂದೆ ಮಹಾರಾಷ್ಟ್ರದಲ್ಲಿ ಸರ್ಕಾರದ ವಿರುದ್ಧ ಷಡ್ಯಂತ್ರ ನಡೆದಾಗ ಅಲ್ಲಿನ ಶಾಸಕರನ್ನು ಕರೆತಂದು ಆತಿಥ್ಯ ನೀಡಿ ಹಿಡಿದಿಟ್ಟುಕೊಂಡು ಸರ್ಕಾರ ಉಳಿಸಿಕೊಂಡ ವಿಚಾರದಲ್ಲಿ ಡಿ.ಕೆ.ಶಿವಕುಮಾರ್ ಚಾಣಾಕ್ಷ್ಯತೆ ಎಲ್ಲರಿಗೂ ಮಾದರಿಯಾಗಿತ್ತು. ಅದರಂತೆ ಗುಜರಾತ್ ಶಾಸಕರನ್ನು ನಿಭಾಯಿಸುವ ಜವಾಬ್ದಾರಿಯನ್ನು ಹೈಕಮಾಂಡ್ ನೀಡಿತ್ತು.
ಇದೆಲ್ಲವನ್ನು ನೋಡುತ್ತಿದ್ದ ಕೆಲವು ಕಾಂಗ್ರೆಸ್ ನಾಯಕರು ತಾವೇ ಮುಂದಾಗಿ ಡಿ.ಕೆ.ಶಿವಕುಮಾರ್ ಅವರ ಚಲನ ವಲನಗಳು, ಆಸ್ತಿ ಹಾಗೂ ವ್ಯವಹಾರಗಳ ಮಾಹಿತಿಗಳನ್ನು ಆದಾಯ ತೆರಿಗೆ ಇಲಾಖೆಗೆ ರಹಸ್ಯವಾಗಿ ನೀಡಿರ ಬಹುದಾ? ಎಂಬ ಪ್ರಶ್ನೆಗಳು ಮೇಲೇಳುತ್ತಿವೆ. ಸದ್ಯಕ್ಕೆ ಯಾವ ಕಾಂಗ್ರೆಸ್ ನಾಯಕರೂ ಮಾತನಾಡದೆ ಮೌನವಾಗಿರುವುದನ್ನು ನೋಡಿದರೆ ಅನುಮಾನಗಳು ಸಹಜವಾಗಿಯೇ ಮೇಲೇಳುತ್ತಿದೆ. ಡಿಕೆಶಿ ತಾಯಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಮಾಡುತ್ತಿರುವ ಆರೋಪವನ್ನು ನೋಡಿದರೆ ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮನದಟ್ಟಾಗಿ ಬಿಡುತ್ತದೆ.

See also  ಕಾಂಗ್ರೆಸ್ ನಾಯಕ ಜಮೀರ್ ಅಹ್ಮದ್ ಗೆ ಕೊರೋನಾ ಪಾಸಿಟಿವ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು