News Kannada
Monday, December 05 2022

ಬೆಂಗಳೂರು ನಗರ

ಎಲ್ಲೆಡೆ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮಾಚರಣೆ!

Photo Credit :

ಎಲ್ಲೆಡೆ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮಾಚರಣೆ!

ಬೆಂಗಳೂರು: ಎಲ್ಲೆಡೆ ಇಂದು ವರಮಹಾಲಕ್ಷ್ಮಿ ಹಬ್ಬದ ಸಡಗರ ಮನೆ ಮಾಡಿದೆ. ಹಬ್ಬಕ್ಕೆ ಬೇಕಾದ ಹೂವು-ಹಣ್ಣು, ಬಾಳೆ, ಮಾವಿನಸೊಪ್ಪು ಸೇರಿದಂತೆ ಅಗತ್ಯ ವಸ್ತುಗಳ ಖರೀದಿಯಲ್ಲಿ ಜನ ತಲ್ಲೀನರಾಗಿರುವುದು ಕಂಡು ಬರುತ್ತಿದೆ. ಈಗಾಗಲೇ ಕೆಲವರು ಮನೆಗಳಲ್ಲಿ ಮಹಾಲಕ್ಷ್ಮಿಯನ್ನು ಪ್ರತಿಷ್ಠಾಪಿಸಿ ಪೂಜಾ ಕೈಂಕರ್ಯದಲ್ಲಿ ನಿರತರಾಗಿರುವುದು ಕಂಡು ಬರುತ್ತಿದೆ. ನಾಗರಪಂಚಮಿ ಕಳೆದ ಬಳಿಕ ಬಂದ ಎರಡನೇ ಹಬ್ಬ ಇದಾಗಿದ್ದು ಜನ ಬರದ ನಡುವೆಯೂ ಹಬ್ಬ ಆಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಬಾರಿ ಸರಿಯಾಗಿ ಮಳೆಯಾಗದೆ ಬಹುತೇಕ ಪ್ರದೇಶಗಳಲ್ಲಿ ಬರ ಪರಿಸ್ಥಿತಿ ಇರುವುದರಿಂದ ಹೂವು-ಹಣ್ಣು ಬೆಳೆಗೆ ಹೊಡೆತ ಬಿದ್ದಿರುವುದರಿಂದ ಉತ್ಪಾದನೆ ಕಡಿಮೆಯಾಗಿದೆ. ಹಾಗಾಗಿ ಕಳೆದ ಬಾರಿಗಿಂತ ಎಲ್ಲ ಹಣ್ಣು, ಹೂ, ತರಕಾರಿಗಳ ಬೆಲೆ ಗಗನಕ್ಕೇರಿದೆ.

ಬೆಂಗಳೂರಿನಲ್ಲಿ ಹಬ್ಬದ ಭರಾಟೆ ಜೋರಾಗಿದೆ. ಮಹಿಳೆಯರು ಲಕ್ಷ್ಮಿ ಪೂಜೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಬಾಳೆಹಣ್ಣಿನಿಂದ ಹಿಡಿದು ಎಲ್ಲ ರೀತಿಯ ಹಣ್ಣುಗಳ ಬೆಲೆಯಲ್ಲಿ ಏರಿಕೆಯಾಗಿದೆ. ಬೆಂಗಳೂರಿನ ಕೆಆರ್ ಮಾರುಕಟ್ಟೆಯಲ್ಲಿ ಕಾಲಿಡಲೂ ಆಗದಷ್ಟು ಜನಸಂದಣಿ ತುಂಬಿದೆ. ನಗರದ ವಿವಿಧ ಬಡಾವಣೆಗಳ ಪ್ರಮುಖ ರಸ್ತೆ ಬದಿ ಹಣ್ಣು, ಹೂವು ಮಾವು, ಬಾಳೆಕಂದುಗಳ ಮಾರಾಟವೂ ಸಾಗುತ್ತಿದ್ದು, ಇದರಿಂದ ಟ್ರಾಫಿಕ್ ಆಗಿದೆ. ಕೆಆರ್ ಮಾರುಕಟ್ಟೆಯಲ್ಲಿ ಮಲ್ಲಿಗೆ ಹೂವು ಕೆಜಿಗೆ 550 ರಿಂದ 620ರೂ. ವರೆಗೆ ಇದ್ದರೆ ಮಲ್ಲೆ ಹೂವು 500ರ ಗಡಿ ದಾಟಿತ್ತು. ಕನಕಾಂಬರ 1600, ಸೇವಂತಿಗೆ 275 ರಿಂದ 325, ಗುಲಾಬಿ 350, ಕಣಗಿಲೆ 300, ಸುಗಂಧರಾಜ ಸುಮಾರು 275ರೂ. ಇದ್ದರೆ ವರಮಹಾಲಕ್ಷ್ಮಿಯ ಕಳಶಕ್ಕೆ ವಿಶೇಷವಾಗಿ ಮುಡಿಸುವ ತಾವರೆ ಹೂವು ಜೋಡಿಗೆ 100ರೂ.ವರೆಗೆ ತಲುಪಿತ್ತು. ಕೇದಗೆ ಕೆಜಿಗೆ 50 ರಿಂದ 80ರೂ. ಇತ್ತು.

ಇದು ಹೂವಿನ ಬೆಲೆಯಾದರೆ ಹಣ್ಣುಗಳ ಬೆಲೆಯಲ್ಲೂ ಭಾರೀ ಏರಿಕೆ ಕಂಡುಬಂದಿದೆ. ಏಲಕ್ಕಿ ಬಾಳೆಹಣ್ಣು 120ರೂ. ದಾಟಿದ್ದರೆ, ಪಚ್ಚಬಾಳೆಹಣ್ಣು ಕೆಜಿಗೆ 35ರೂ. ಇದೆ. ಸೀತಾಫಲ 70ರೂ., ದಾಳಿಂಬೆ 120 ರಿಂದ 140ರೂ., ನೀಲಿ ದ್ರಾಕ್ಷಿ 90ರೂ. ಸೀಡ್ಲೆಸ್ ದ್ರಾಕ್ಷಿ 180ರೂ., ಮೂಸಂಬಿ 75ರೂ., ಮರಸೇಬು 200ರೂ., ಅನಾನಸ್ 60ರೂ., ನೀಲಂ ಮಾವಿನ ಹಣ್ಣು 80 ರಿಂದ 100ರೂ. ಇದೆ. ಕೆಲವೆಡೆ ಹೆಚ್ಚು ಮತ್ತು ಕಡಿಮೆ ದರದಲ್ಲಿ ಮಾರಾಟ ನಡೆಯುತ್ತಿದೆ. ಕಷ್ಟವೋ ಸುಖವೋ ಹೇಗೋ ಜನ ಸಾಂಪ್ರದಾಯಿಕವಾಗಿ ನಡೆದುಕೊಂಡು ಬಂದಿರುವ ಹಬ್ಬವನ್ನು ಆಚರಿಸಿ ಸಂಭ್ರಮಿಸುತ್ತಿದ್ದಾರೆ.

See also  ಕಾಲ್ ಸೆಂಟರ್ ನ ಮೂಲಕ ಆಸ್ಪತ್ರೆಗಳ ರಿಯಾಲಿಟಿ ಚೆಕ್- ಸಚಿವ ಅರವಿಂದ ಲಿಂಬಾವಳಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು