News Kannada
Saturday, December 03 2022

ಬೆಂಗಳೂರು ನಗರ

ಮೂರು ದಿನ ಬಿಜಾಪುರದಲ್ಲಿ ರಾಷ್ಟ್ರೀಯ ಜಲ ಸಮಾವೇಶ

Photo Credit :

ಮೂರು ದಿನ ಬಿಜಾಪುರದಲ್ಲಿ ರಾಷ್ಟ್ರೀಯ ಜಲ ಸಮಾವೇಶ

ಬೆಂಗಳೂರು: ಬದಲಾದ ಕಾಲಘಟ್ಟದಲ್ಲಿ ಮಳೆ ಸುರಿಯುವುದೇ ಕಷ್ಟವಾಗಿದ್ದು, ಇದಕ್ಕೆ ಪರ್ಯಾಯ ವ್ಯವಸ್ಥೆಯನ್ನು ಕಂಡುಕೊಳ್ಳುವ ಸಲುವಾಗಿ ಆ ಮೂಲಕ ರಾಜ್ಯ ಹಾಗೂ ದೇಶದಲ್ಲಿ ಜಲಕ್ರಾಂತಿ ಮಾಡುವ ಉದ್ದೇಶದಿಂದ ಆ. 16 ರಿಂದ 18 ರವರೆಗೆ ಮೂರು ದಿನಗಳ ಕಾಲ ಬಿಜಾಪುರದಲ್ಲಿ ರಾಷ್ಟ್ರೀಯ ಜಲಸಮಾವೇಶ ನಡೆಯಲಿದೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಬಿಜಾಪುರದ ಆದಿಲ್ ಷಾಹಿ ದೊರೆಗಳ ಕಾಲದಲ್ಲಿದ್ದ ಕೆರೆಗಳು ಹಾಗೂ ಬಾವಿಯಿಂದ ವಿಜಯನಗರದ ಲಕ್ಷಾಂತರ ಮಂದಿಗೆ ನೀರು ಪೂರೈಸಲಾಗುತ್ತಿತ್ತು ಎಂಬ ವಿವರವನ್ನು ಗಮನಿಸಿದ ಮೇಲೆ ಜಲತಜ್ಞ, ಮ್ಯಾಗ್ಸೇಸೆ ಪ್ರಶಸ್ತಿ ವಿಜೇತ ರಾಜೇಂದ್ರ ಸಿಂಗ್ ಅವರು ಅಲ್ಲಿಯೇ ರಾಷ್ಟ್ರೀಯ ಜಲಸಮಾವೇಶ ಮಾಡಲು ತೀರ್ಮಾನಿಸಿದರು.

ಸಮಾವೇಶದ ಮೂಲಕ ನಾವು ಭಾರೀ ನೀರಾವರಿಯ ಕುರಿತಾಗಿಯಷ್ಟೇ ಅಲ್ಲದೆ ಸಣ್ಣ ನೀರಾವರಿಯ ಕಡೆಗೂ ಗಮನ ಹರಿಸಬೇಕಾದ ಬಗ್ಗೆಯೂ ಚಿಂತನೆ ನಡೆಸಲಾಗುವುದು. ಕರ್ನಾಟಕ ಮಾತ್ರವಲ್ಲದೆ, ದೇಶ ಹಾಗೂ ಜಗತ್ತಿನಲ್ಲಿ ಜಲಕ್ರಾಂತಿಯಾಗಬೇಕಾದ ಅಗತ್ಯದ ಕುರಿತು ಸಂದೇಶ ರವಾನಿಸುವುದು ಜಲ ಸಮಾವೇಶದ ಉದ್ದೇಶವಾಗಿದೆ ಎಂದರು.ಇಡೀ ದೇಶದಲ್ಲೇ ಹನಿ ನೀರಾವರಿ ಪದ್ಧತಿಯನ್ನು ಯಶಸ್ವಿಯಾಗಿ ಅಳವಡಿಸಿದ ಮೊಟ್ಟ ಮೊದಲ ರಾಜ್ಯ ಕರ್ನಾಟಕ. ಅದೇ ರೀತಿ ಸೂಕ್ಷ್ಮ ನೀರಾವರಿಯ ಮೂಲಕ ನೀರಿನ ಬಳಕೆಯನ್ನು ನಿಯಂತ್ರಿಸುವುದು ಸೇರಿದಂತೆ ಹಲವು ಪ್ರಮುಖ ಅಂಶಗಳ ಕುರಿತು ರಾಷ್ಟ್ರೀಯ ಜಲಸಮಾವೇಶದಲ್ಲಿ ಚರ್ಚಿಸಲಾಗುವುದು ಎಂದು ಇದೇ ವೇಳೆ ಹೇಳಿದರು.ಜಲತಜ್ಞ ರಾಜೇಂದ್ರ ಸಿಂಗ್ ಮಾತನಾಡಿ ಮಳೆಯ ಚಕ್ರ ಬದಲಾಗಿದೆ. ಆದರೆ ರೈತರ ಕೃಷಿ ಚಕ್ರ ಬದಲಾಗಿಲ್ಲ. ಹೀಗಾಗಿ ಅವರು ನಿರಂತರವಾಗಿ ನಷ್ಟವನ್ನು ಅನುಭವಿಸುತ್ತಿದ್ದಾರೆ. ಇದು ಮುಂದುವರಿಯುತ್ತಲೇ ಇದೆ. ಈ ನಡುವೆ ಕಳೆದ ಇಪ್ಪತ್ತು ವರ್ಷಗಳಿಂದ ನಾವು ನದಿ ಜೋಡಣೆಯ ವಿಷಯವನ್ನು ಕೇಳುತ್ತಲೇ ಬಂದಿದ್ದೇವೆ. ಆದರೆ ಅದಕ್ಕೂ ಮುನ್ನ ನಮ್ಮ ರಾಜರುಗಳ ಕಾಲದಲ್ಲಿ ಕೆರೆ, ಕಟ್ಟೆಗಳನ್ನು ಹೇಗೆ ಭರ್ತಿ ಮಾಡುತ್ತಿದ್ದರು? ಮಳೆ ಆಧಾರಿತ ಪ್ರದೇಶಗಳಲ್ಲೂ ಲಕ್ಷಾಂತರ ಮಂದಿಗೆ ಹೇಗೆ ಕುಡಿಯಲು, ಕೃಷಿ ಮಾಡಲು ನೀರು ಒದಗಿಸುತ್ತಿದ್ದರು ಎಂಬುದನ್ನು ನೋಡಬೇಕಿದೆ ಎಂದರು.

ದೊಡ್ಡವರಿಗಾಗಿ ದೊಡ್ಡ ಯೋಜನೆಗಳು ಜಾರಿಯಾಗುತ್ತವೆ. ಆದರೆ ಸಣ್ಣವರಿಗಾಗಿ ಸಣ್ಣ ಯೋಜನೆಗಳು ಜಾರಿಯಾಗುತ್ತವೆ. ಆದರೆ ಅವು ಪರಿಣಾಮಕಾರಿಯಾಗಿರುತ್ತವೆ ಎಂಬುದಕ್ಕೆ ಬಿಜಾಪುರವೇ ಉದಾಹರಣೆ. ಇದೇ ಕಾರಣಕ್ಕಾಗಿ ಬಿಜಾಪುರದಲ್ಲಿ ರಾಷ್ಟ್ರೀಯ ಜಲಸಮಾವೇಶವನ್ನು ನಡೆಸಲಾಗುತ್ತಿದೆ ಎಂದರು.ನೀರಿಗಾಗಿ ದೇಶಾದ್ಯಂತ ಕೆಲಸ ಮಾಡಿದ ರಾಜಕೀಯ ನಾಯಕರು, ಜಲತಜ್ಞರು, ತಾಂತ್ರಿಕ ಪರಿಣಿತರು ಸೇರಿದಂತೆ ಎಲ್ಲರೂ ಈ ಸಮಾವೇಶದಲ್ಲಿ ಭಾಗವಹಿಸಿ ತಮ್ಮ ತಮ್ಮ ಅನುಭವಗಳನ್ನು ಹೇಳಲಿದ್ದಾರೆ. ಆದರೆ ಯಾರೂ ತಮ್ಮ ಪ್ರಬಂಧವನ್ನು ಮಂಡಿಸುವುದಿಲ್ಲ. ಪ್ರಬಂಧ ಮಂಡಿಸುವುದು ಅರ್ಥಹೀನ ಎಂದರು. ಆದರೂ ಹವಾಮಾನ ವೈಪರೀತ್ಯದ ಪರಿಣಾಮವಾಗಿ ಕರ್ನಾಟಕ ಸೇರಿದಂತೆ ದೇಶದ ಎಲ್ಲ ಭಾಗಗಳೂ ಬರಗಾಲ ಇಲ್ಲವೇ ಪ್ರವಾಹದ ಪರಿಸ್ಥಿತಿಯನ್ನು ಎದುರಿಸುತ್ತವೆ. ಹೀಗಾಗಿ ವ್ಯವಸ್ಥೆಯನ್ನು ಬರಗಾಲ ಹಾಗೂ ಪ್ರವಾಹ ಪೀಡಿತ ಸ್ಥಿತಿಯಿಂದ ಮುಕ್ತಗೊಳಿಸುವುದು ಹೇಗೆ? ಎಂಬ ಕುರಿತು ಸಮಾವೇಶದಲ್ಲಿ ಚರ್ಚಿಸಲಾಗುವುದು ಎಂದು ಹೇಳಿದರು

See also  ಬೆಂಗಳೂರಿನ ಬಿಟ್ ಕಾಯಿನ್ ಎಟಿಎಂಗೆ ಬೀಗ ಜಡಿದ ಸೈಬರ್ ಪೊಲೀಸರು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು