News Kannada
Friday, December 09 2022

ಬೆಂಗಳೂರು ನಗರ

ಕೇಂದ್ರ ಸಂಪುಟ ವಿಸ್ತರಣೆ: ರಾಜ್ಯ ಸಂಸದರಿಗೆ ಶುಕ್ರ ದೆಸೆ!

Photo Credit :

ಕೇಂದ್ರ ಸಂಪುಟ ವಿಸ್ತರಣೆ: ರಾಜ್ಯ ಸಂಸದರಿಗೆ ಶುಕ್ರ ದೆಸೆ!

ಬೆಂಗಳೂರು: ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿರುವ ಸಂದರ್ಭದಲ್ಲಿ ರಾಜಕೀಯವಾಗಿ ಕಸರತ್ತು ನಡೆಯುತ್ತಿದ್ದು, ಕರ್ನಾಟಕದ ಮೇಲೆ ಕಣ್ಣಿಟ್ಟಿರುವ ಪ್ರಧಾನಿ ಮೋದಿ ಮುಂದಿನ ತಮ್ಮ ಸಂಪುಟ ವಿಸ್ತರಣೆ ಸಂದರ್ಭ ಕರ್ನಾಟಕದ ಹೆಚ್ಚಿನ ಸಂಸದರಿಗೆ ಸಚಿವ ಸ್ಥಾನಗಳನ್ನು ನೀಡುತ್ತಾರೆ ಎಂಬ ಮಾತುಗಳು ಪಕ್ಷದ ಪಡಸಾಲೆಯಲ್ಲಿ ಹರಿದಾಡುತ್ತಿದೆ.

ಈಗಾಗಲೇ ರಾಜ್ಯ ಪ್ರವಾಸ ಮಾಡಿ ಹೋಗಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಮುಂದಿನ ರಾಜ್ಯ ವಿಧಾನಸಭಾ ಚುನಾವಣೆ ವೇಳೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ರಾಜ್ಯ ಸಂಪುಟದಲ್ಲಿ ಕೆಲವು ಸಮುದಾಯದ ನಾಯಕರಿಗೆ ಸಚಿವ ಪಟ್ಟ ನೀಡಿ ಆಯಾ ಸಮುದಾಯದ ಒಲವು ಗಿಟ್ಟಿಸಿಕೊಳ್ಳುವ ತಂತ್ರವನ್ನು ತಿಳಿದಿದ್ದು, ಅದನ್ನು ಕೂಡ ಕೇಂದ್ರ ಸಚಿವ ಸಂಪುಟದಲ್ಲಿ ಬಳಸಿಕೊಂಡು ಒಂದಷ್ಟು ಸಂಸದರಿಗೆ ಸಚಿವ ಸ್ಥಾನ ನೀಡುವ ಮೂಲಕ ಕಾಂಗ್ರೆಸ್ಗೆ ಸೆಡ್ಡು ಹೊಡೆಯಲು ಮುಂದಾಗಿದ್ದಾರೆ ಎನ್ನಲಾಗಿದೆ. ಕೇಂದ್ರ ಸಂಪುಟ ವಿಸ್ತರಣೆಯಾದರೆ ಅದರಲ್ಲಿ ಹೊಸದಾಗಿ ಕರ್ನಾಟಕದ ಹಲವು ಮಂದಿಗೆ ಸಚಿವ ಸ್ಥಾನ ನೀಡಲಾಗುತ್ತದೆ ಎನ್ನಲಾಗಿದ್ದು, ಈ ಪೈಕಿ ಕರ್ನಾಟಕದ ಮೂವರಿಗೆ ಮತ್ತೆ ಸ್ಥಾನ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಮುಖ್ಯವಾಗಿ ಬಿಜೆಪಿ ಬೆನ್ನಿಗೆ ನಿಂತಿರುವ ಲಿಂಗಾಯತ ಸಮುದಾಯ, ವಾಲ್ಮೀಕಿ, ಹಿಂದುಳಿದ ಹಾಗೂ ಒಕ್ಕಲಿಗ ಸಮುದಾಯಕ್ಕೆ ಸಂಪುಟದಲ್ಲಿ ಸ್ಥಾನ ಸಿಗುವ ಸಂಭವವಿದ್ದು ರೇಸ್ನಲ್ಲು ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ, ಬೆಳಗಾವಿ ಸಂಸದ ಸುರೇಶ್ ಅಂಗಡಿ (ಲಿಂಗಾಯತ ಸಮುದಾಯ) , ವಾಲ್ಮೀಕಿ ಸಮುದಾಯದಿಂದ ಬಳ್ಳಾರಿ ಸಂಸದ ಶ್ರೀರಾಮುಲು, ಒಕ್ಕಲಿಗ ಸಮುದಾಯದಿಂದ ಚಿಕ್ಕಮಗಳೂರು -ಉಡುಪಿ ಸಂಸದೆ ಶೋಭಾ ಕರಂದ್ಲಾಜೆ, ದಕ್ಷಿಣ ಕನ್ನಡ ಸಂಸದ ನಳೀನ್ ಕುಮಾರ್ ಕಟೀಲ್, ಹಿಂದುಳಿದ ವರ್ಗಗಳ ಸಮುದಾಯದಿಂದ ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಸಂಸದ ಪಿ.ಸಿ.ಮೋಹನ್ ಮೊದಲಾದವರ ಹೆಸರುಗಳು ಪ್ರಧಾನಿ ಮುಂದೆ ಇದೆ ಎನ್ನಲಾಗುತ್ತಿದೆ.ಕೇಂದ್ರ ಸಂಪುಟ ವಿಸ್ತರಣೆಯಾಗುತ್ತಿದೆ ಎನ್ನುವಾಗಲೇ ಕೆಲವರು ತಮ್ಮ ರಾಜಕೀಯ ಗುರುಗಳ ಮೂಲಕ ಶಿಫಾರಸ್ಸು ಮಾಡುವುದರಲ್ಲಿ ತಲ್ಲೀನರಾಗಿದ್ದಾರೆ.

ಯಾರು ಯಾವುದೇ ರೀತಿಯ ಶಿಫಾರಸ್ಸುಗಳನ್ನು ಮಾಡಿದರೂ ಪ್ರಧಾನಿ ಮೋದಿ ಅವರು ಎಲ್ಲ ಸಂಸದರ ಜಾತಕಗಳನ್ನು ತರಿಸಿಕೊಂಡು ಅವರ ಕೆಲಸ ಕಾರ್ಯಗಳ ಆಧಾರದ ಮೇಲೆ ನೀಡಿದರೂ ಜಾತಿ ಸಮುದಾಯಗಳು ಇಲ್ಲಿ ಹೆಚ್ಚಿನ ಪಾತ್ರವಹಿಸುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಮುಂದಿನ ದಿನಗಳು ಹೇಗಾಗುತ್ತವೆ ಎಂಬುದನ್ನು ಕಾದು ನೋಡುವುದು ಅನಿವಾರ್ಯವಾಗಿದೆ

See also  ಬಿಎಂಟಿಸಿ ವಿದ್ಯಾರ್ಥಿ ಪಾಸ್ ದರದಲ್ಲಿ ಏರಿಕೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು