ಬೆಂಗಳೂರು: ಮಗನಿಗೆ ಖರೀದಿಸಿದ ಹೊಸ ಬೈಕ್ ನ್ನು ಬದಲಾಯಿಸಲು ಶೋ ರೂಂ ಅಧಿಕಾರಿಗಳು ನಿರಾಕರಿಸಿದ್ದಕ್ಕೆ ಮಹಿಳೆಯೊಬ್ಬಳು ಶೋ ರೂಂ ಒಳಗಡೆಯೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಕುರಿತು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರೋಜಮ್ಮ(48) ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ಇವರನ್ನು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಪೊಲೀಸರ ಪ್ರಕಾರ, ಈಚೆಗೆ ಸರೋಜಮ್ಮ ತನ್ನ ಮಗನಿಗೆ ಬಜಾಜ್ ಬೈಕ್ ಡೊಮಿನಾರ್ 400 ನ್ನು ಖರೀದಿಸಿದ್ದರು. ಅದರಲ್ಲಿ ಕೆಲವು ದೋಷಗಳು ಕಂಡು ಬಂದಾಗ ಸರೋಜಮ್ಮ ಬೈಕ್ ನ್ನು ಬದಲಾಯಿಸಬೇಕು ಎಂದು ಶೋ ರೂಂನ ಸಿಬ್ಬಂದಿ ಬಳಿ ಕೇಳಿಕೊಂಡಿದ್ದಾರೆ.
ಈ ವೇಳೆ ಅಧಿಕಾರಿಗಳು ನಿರಾಕರಿಸಿದ್ದಕ್ಕೆವಕೀಲರ ಮುಖಾಂತರ ನೋಟಿಸನ್ನು ಜಾರಿ ಮಾಡಿದ್ದಾರೆ. ಇದಕ್ಕೆ ಬೈಕ್ ಶೋ ರೂ ಅಧಿಕಾರಿಗಳು ಪ್ರತಿಕ್ರಿಯೆ ನೀಡದಕ್ಕೆ ಮಂಗಳವಾರ ಬೈಕ್ ಶೋ ರೂಂನ ಒಳಗಡೆಯೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ.