News Kannada
Wednesday, October 05 2022

ಬೆಂಗಳೂರು ನಗರ

ಮಾನಸಿಕ ಆರೋಗ್ಯ ಸಮಸ್ಯೆ ಹೆಚ್ಚಳ ಕಳವಳಕಾರಿ: ರಾಮನಾಥ್ ಕೋವಿಂದ್ - 1 min read

Photo Credit :

ಮಾನಸಿಕ ಆರೋಗ್ಯ ಸಮಸ್ಯೆ ಹೆಚ್ಚಳ ಕಳವಳಕಾರಿ: ರಾಮನಾಥ್ ಕೋವಿಂದ್

ಬೆಂಗಳೂರು: ಇಂದಿನ ದಿನಗಳಲ್ಲಿ ಮಾನಸಿಕ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಾ ಇರುವುದು ತುಂಬಾ ಕಳವಳಕಾರಿ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ತಿಳಿಸಿದರು.

ಶನಿವಾರ ನಡೆದ ನಗರದಲ್ಲಿ ನಡೆದ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನಗಳ ಸಂಸ್ಥೆ(ನಿಮ್ಹಾನ್ಸ್) 22ನೇ ಘಟಿಕೋತ್ಸವ ಸಮಾರಂಭದಲ್ಲಿ ಪದವಿ ಪ್ರದಾನ ಮಾಡಿ ಭಾಷಣಗೈದರು.

ದೇಶದಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಯುಳ್ಳವರ ಸಂಖ್ಯೆ ಜಪಾನ್ ನ ಒಟ್ಟಾರೆ ಜನಸಂಖ್ಯೆಗಿಂತ ಹೆಚ್ಚಾಗಿರುವುದು ಕಳವಳಕಾರಿ. ನಿಮ್ಹಾನ್ಸ್ ರಾಷ್ಟ್ರೀಯ ಮಾನಸಿಕ ಆರೋಗ್ಯದ ಬಗ್ಗೆ ನಡೆಸಿರುವ ಸಮೀಕ್ಷೆ ವರದಿ ಗಮನಿಸಿದರೆ ತುಂಬಾ ಕಳವಳ ಉಂಟಾಗುತ್ತದೆ ಎಂದು ಕೋವಿಂದ್ ಹೇಳಿದರು.

ನಿಮ್ಹಾನ್ಸ್ ದೇಶದ ಆಸ್ತಿಯಾಗಿದೆ. ಯಾಕೆಂದರೆ ಪ್ರತೀ ವರ್ಷ ಸುಮಾರು ಏಳು ಲಕ್ಷ ರೋಗಿಗಳಿಗೆ ಚಿಕಿತ್ಸೆ ನೀಡುತ್ತದೆ. ಮನೋರೋಗಿಗಳಲ್ಲಿ ಮೂವರಲ್ಲಿ ಇಬ್ಬರು ಬಡವರಾಗಿದ್ದಾರೆ. ಅವರು ಉಚಿತ ಮತ್ತು ಮಾನವೀಯತೆ ಚಿಕಿತ್ಸೆ ಪಡೆಯುತ್ತಿದ್ದು, ಇದು ಪ್ರಶಂಸನೀಯ ಕ್ರಮ ಎಂದರು.

See also  ಮಹಿಳೆಗೆ ಕಾರು ಡಿಕ್ಕಿ: ಸ್ಥಳದಲ್ಲೇ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು