ಬೆಂಗಳೂರು: ಬಳ್ಳಾರಿಯ ಉಪವಿಭಾಗಾಧಿಕಾರಿ ಸಹಿತ ರಾಜ್ಯದ ವಿವಿಧೆಡೆ ಹಲವಾರು ಇಲಾಖೆಗಳ 12 ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ಭಷ್ಟಾಚಾರ ನಿಗ್ರಹ ದಳ(ಎಸಿಬಿ)ದ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ.
ಶಿವಮೊಗ್ಗ ಜಿಲ್ಲೆಯಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ(ಕೆಪಿಟಿಸಿಎಲ್), ಜಿಲ್ಲಾ ಪಂಚಾಯತ್ ಸೇರಿದಂತೆ ದಾವಣಗೆರೆ, ವಿಜಯಪುರ, ಗದಗ, ಬೆಂಗಳೂರು, ರಾಯಚೂರು ಮೊದಲಾದೆಡೆ ದಾಳಿ ನಡೆದಿದೆ.
ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ್ದ ಆರೋಪದ ಮೇಲೆ ನಾಗರಾಜನ್, ಬಿ.ಎಸ್. ಪ್ರಹ್ಲಾದ್, ಬಿ.ಟಿ. ಕುಮಾರಸ್ವಾಮಿ. ಆರ್. ವಿ. ಕಾಂತರಾಜು, ಬಿ.ಎಸ್. ಬಾಲನ್, ಜೆ.ಸಿ. ಜಗದೀಶಪ್ಪ, ವೆಂಕಟೇಶ್, ಅಶೋಕ ಗೌಡಪ್ಪ ಪಾಟೀಲ್, ಸೋಮಪ್ಪ ಟಿ. ಲಮಾಣಿ, ರೇಖಾ, ನರಸಿಂಹಲು, ಅಮರೇಶ ಬೆಂಚಮರಡಿ ದಾಳಿಗೊಳಗಾದ ಅಧಿಕಾರಿಗಳು.
ಖಚಿತ ಮಾಹಿತಿ ಪಡೆದುಕೊಂಡಿದ್ದ ಎಸಿಬಿ, ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲಿಸಿದೆ.