ಬೆಂಗಳೂರು: ಎಪ್ರಿಲ್ 7ರಿಂದ ರಾಷ್ಟ್ರದಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ಅಖಿಲ ಭಾರತೀಯ ಲಾರಿ ಮಾಲಕರ ಸಂಘದ ಅಧ್ಯಕ್ಷ ಬಿ. ಚನ್ನಾರೆಡ್ಡಿ ಹೇಳಿದ್ದಾರೆ.
ವಿಮೆ ಕಂತು ಏರಿಕೆ ಖಂಡಿಸಿ ಈ ಮುಷ್ಕರ ನಡೆಸಲಾಗುತ್ತಿದೆ. ಸ್ವಯಂ ಪ್ರೇರಿತವಾಗಿ ವಿಮಾ ಕಂತಿನ ದರ ಹೆಚ್ಚಿಸುತ್ತಿರುವ ವಿಮೆ ನಿಯಂತ್ರಣಾ ಪ್ರಾಧಿಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವುದಾಗಿ ಪತ್ರಿಕಾಗೋಷ್ಠಿಯಲ್ಲಿ ಚನ್ನಾರೆಡ್ಡಿ ತಿಳಿಸಿದ್ದಾರೆ.
ಸರ್ಕಾರದ ಪಡಿತರ ವಿತರಣೆ ಲಾರಿಗಳ ಓಡಾಟವೂ ಸ್ಥಗಿತವಾಗಲಿದೆ. ಏ.7ರಂದು ಸರಕು ಲಾರಿಗಳು ಸಂಚರಿಸುವುದಿಲ್ಲ ಎಂದರು.