News Kannada
Friday, December 02 2022

ಬೆಂಗಳೂರು ನಗರ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಪ್ರಥಮ ಸ್ಥಾನದಲ್ಲಿ ದ.ಕ

Photo Credit :

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಪ್ರಥಮ ಸ್ಥಾನದಲ್ಲಿ ದ.ಕ

ಬೆಂಗಳೂರು: ಪದವಿ ಪೂರ್ವ ಶಿಕ್ಷಣ ಇಲಾಖೆ ದ್ವಿತೀಯ ಪಿಯು ಫಲಿತಾಂಶವನ್ನು ಸೋಮವಾರ ಪ್ರಕಟಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದರೆ, ಉಡುಪಿ ಜಿಲ್ಲೆ ದ್ವಿತೀಯ ಸ್ಥಾನದಲ್ಲಿದೆ. ಅತೀ ಕಡಿಮೆ ಸ್ಥಾನವನ್ನು ಚಿಕ್ಕೋಡಿ ಪಡೆದಿದ್ದು, ಈ ಬಾರಿ ಒಟ್ಟು ಶೇ.59.56 ಫಲಿತಾಂಶ ಪಡೆದುಕೊಂಡಿದೆ.

ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದಿದ್ದು ಶೇ. 91.49 ಫಲಿತಾಂಶ, ಉಡುಪಿ ದ್ವಿತೀಯ ಸ್ಥಾನದಲ್ಲಿದ್ದು ಶೇ.90.67 ಫಲಿತಾಂಶ ಪಡೆದರೆ, ಕೊಡಗು ಮೂರನೇ ಸ್ಥಾನ ಪಡೆದಿದ್ದು ಶೇ. 83.94 ಫಲಿತಾಂಶ ಪಡೆದಿದೆ. ಚಿಕ್ಕೋಡಿಯು ಕೊನೆಯ ಸ್ಥಾನದಲ್ಲಿದ್ದು 52.20 ಫಲಿತಾಂಶ ಪಡೆದಿದೆ ಎಂದು ಪಿಯು ಮಂಡಳಿ ನಿರ್ದೇಶಕಿ ಶಿಖಾ ತಿಳಿಸಿದ್ದಾರೆ.

3 ಸರಕಾರಿ ಕಾಲೇಜು, 122 ಖಾಸಗಿ ಕಾಲೇಜು, 3 ಅನುದಾನಿತ ಕಾಲೇಜು ಹೀಗೆ ಸುಮಾರು 118 ಕಾಲೇಜು ಶೂನ್ಯ ಫಲಿತಾಂಶ ದಾಖಲಿಸಿದ್ದು, 4,08421 ಮಕ್ಕಳು ತೇರ್ಗಡೆ ಹೊಂದಿದ್ದಾರೆ. ಕಲಾ ವಿಭಾಗದಲ್ಲಿ ಶೇ. 67, ವಾಣಿಜ್ಯ ವಿಭಾಗದಲ್ಲಿ ಶೇ.63.64 ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ.67.48 ಫಲಿತಾಂಶ ಪಡೆದಿದೆ.

ಈ ಬಾರಿಯ ದ್ವಿತೀಯ ಪಿಯು ಪರೀಕ್ಷೆಗೆ 6.85 ಲಕ್ಷ ವಿದ್ಯಾರ್ಥಿಗಳು ಕುಳಿತಿದ್ದು, ಅದರಲ್ಲಿ 4.08 ಲಕ್ಷ ವಿದ್ಯಾರ್ಥಿ-ವಿದ್ಯಾರ್ಥಿನಿಯರು ತೇರ್ಗಡೆಯಾಗಿದ್ದಾರೆ. 68 ಕಾಲೇಜುಗಳಲ್ಲಿ ಶೇ.100ರಷ್ಟು ಫಲಿತಾಂಶ ಕಂಡುಬಂದಿದೆ.

54,692 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾಗಿದ್ದು, ವಿಜ್ಞಾನ ವಿಭಾಗದಲ್ಲಿ 597, ವಾಣಿಜ್ಯ ವಿಭಾಗದಲ್ಲಿ 595 ಅತಿ ಹೆಚ್ಚು ಅಂಕ ಗಳಿಸಿದ್ದಾರೆ. ಮೇ.14ವರೆಗೆ ಮರು ಮೌಲ್ಯಮಾಪಕ್ಕೆ ಅವಕಾಶವಿದ್ದು, ಜೂನ್ 8 ರಿಂದ ಪೂರಕ ಪರೀಕ್ಷೆ ಆರಂಭವಾಗಲಿದೆ.

See also  ಬೀದಿ ನಾಯಿ ಮರಿಗಳನ್ನು ಕೊಂದು ಹಾಕುತ್ತಿದ್ದ ವ್ಯಕ್ತಿಯ ಪತ್ತೆಗೆ ಪೊಲೀಸರ ಹುಡುಕಾಟ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

189

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು