News Kannada
Friday, September 30 2022

ಬೆಂಗಳೂರು ನಗರ

ಕಾಂಗ್ರೆಸ್ ಶಾಸಕರಿಗೆ ನಾಳೆ ಬಿಡುಗಡೆ ಭಾಗ್ಯ! - 1 min read

Photo Credit :

ಕಾಂಗ್ರೆಸ್ ಶಾಸಕರಿಗೆ ನಾಳೆ ಬಿಡುಗಡೆ ಭಾಗ್ಯ!

ಬೆಂಗಳೂರು: ಫಲಿತಾಂಶ ಪ್ರಕಟವಾದ ಮೇ 15ರಿಂದ ಇಂದಿನವರೆಗೆ ಕಾಂಗ್ರೆಸ್ ನ ಶಾಸಕರು ದಿಗ್ಬಂಧನದಲ್ಲಿದ್ದಾರೆ. ಆದರೆ ನಾಳೆ ಈ ಶಾಸಕರಿಗೆ ಬಿಡುಗಡೆ ಭಾಗ್ಯ ಸಿಗುವುದು.

ಕುಟುಂಬದವರ ಮುಖ ಕೂಡ ನೋಡದರೆ ಕಳೆದ 9 ದಿನಗಳಿಂದ ಕಾಂಗ್ರೆಸ್ ನ ಶಾಸಕರು ಹೋಟೆಲ್, ಬಸ್ ಮತ್ತು ರೆಸಾರ್ಟ್ ನಲ್ಲೇ ಉಳಿದುಕೊಂಡಿದ್ದಾರೆ. ನಾಳೆ ಕಾಂಗ್ರೆಸ್-ಜೆಡಿಎಸ್ ನ ಸರ್ಕಾರದ ವಿಶ್ವಾಸಮತ ಯಾಚನೆಯಾಗಿರುವ ಹಿನ್ನೆಲೆಯಲ್ಲಿ ಶಾಸಕರಿಗೆ ಇದರ ಬಳಿಕ ಬಿಡುಗಡೆ ಭಾಗ್ಯ ಸಿಗಬಹುದು.

ಬಿಜೆಪಿಯವರ ಆಪರೇಷನ್ ಕಮಲದ ಭೀತಿಯಿಂದಾಗಿ ಕಾಂಗ್ರೆಸ್ ಶಾಸಕರನ್ನು ಮೊದಲು ಬೆಂಗಳೂರಿನ ಹೋಟೆಲ್ ನಲ್ಲಿ ಬಳಿಕ ರೆಸಾರ್ಟ್, ಇದರ ಬಳಿಕ ಹೈದರಾಬಾದ್ ನ ರೆಸಾರ್ಟ್ ಗೆ ಕರೆದುಕೊಂಡು ಹೋಗಲಾಗಿತ್ತು.

ಈ ವೇಳೆ ಕೆಲವು ಶಾಸಕರು ಅಸಮಾಧಾನ ಕೂಡ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ತಮ್ಮ ಮೇಲೆ ನಂಬಿಕೆಯಿಲ್ಲದೆ ಇರುವ ಹೈಕಮಾಂಡ್ ಟಿಕೆಟ್ ನೀಡಿರುವುದು ಯಾಕೆ ಎಂದು ಕೆಲ ಶಾಸಕರು ವಾಗ್ವಾದ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.

ನಿನ್ನೆ ಕುಮಾರಸ್ವಾಮಿ ಅವರು ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ನಾಳೆ ಬಹುಮತ ಸಾಬೀತು ಮಾಡಲಿದ್ದಾರೆ. ಈ ವೇಳೆ ಶಾಸಕರು ಹಾಜರಾದ ಬಳಿಕ ಅವರು ದಿಗ್ಬಂಧನದಿಂದ ಮುಕ್ತರಾಗುವರು ಎನ್ನಲಾಗಿದೆ.

See also  ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮತಾಂತರ ನಿಷೇಧ ಕಾಯ್ದೆಗೆ ಒಪ್ಪಿಗೆ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು