News Kannada
Sunday, September 25 2022

ಬೆಂಗಳೂರು ನಗರ

ಸಮಯ ಬಂದಾಗ ಡೈರಿ ಬಿಡುಗಡೆ: ಸಚಿವ ಡಿಕೆ ಶಿವಕುಮಾರ್ - 1 min read

Photo Credit :

ಸಮಯ ಬಂದಾಗ ಡೈರಿ ಬಿಡುಗಡೆ: ಸಚಿವ ಡಿಕೆ ಶಿವಕುಮಾರ್

ಬೆಂಗಳೂರು: ನನ್ನ ಬಳಿಕ ಹಲವಾರು ಡೈರಿಗಳಿವೆ. ಅದರಲ್ಲಿ ಏನಿದೆ ಎಂದು ಹೆಚ್ಚಿನವರಿಗೆ ತಿಳಿದಿದೆ. ಕೊನೆಯಲ್ಲಿ ಏನೂ ಆಗಲ್ಲವೆಂದಾಗ ಇದನ್ನು ಬಹಿರಂಗಪಡಿಸುತ್ತೇನೆ ಎಂದು ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಪಡೆದಿರುವ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ನನ್ನನ್ನು ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಡಿಕೆಶಿ ಯಾವುದಕ್ಕೂ ಹೆದರಲ್ಲ. ನ್ಯಾಯಾಲಯದಲ್ಲಿರುವ ವಿಷಯದ ಬಗ್ಗೆ ಏನೂ ಹೇಳಲ್ಲ. ಇಲ್ಲವಾಗಿದ್ದಲ್ಲಿ ನಾನೇನು ಎಂದು ತೋರಿಸುತ್ತಿದ್ದೆ. ಆದಾಯ ತೆರಿಗೆ ಕೇಸ್ ಹಾಕಿದ್ದಾರೆ. ಆದರೆ ಸಮನ್ಸ್ ಬಂದಿಲ್ಲವೆಂದು ಡಿಕೆಶಿ ತಿಳಿಸಿದ್ದಾರೆ.

ಖುದ್ದಾಗಿ ವಿಚಾರಣೆಗೆ ಹಾಜರಾಗುವಂತೆ ನನಗೆ, ತಾಯಿ ಮತ್ತು ಸೋದರನಿಗೆ ನೋಟಿಸ್ ಬಂದಿದೆ. ಯಾಕೆ ಇದೆಲ್ಲಾ ನಡೆಯುತ್ತಿದೆ ಎಂದು ನನಗೆ ತಿಳಿದಿದೆ. ಈಗ ಏನೂ ಮಾತನಾಡಲ್ಲ. ಸಮಯ ಬಂದಾಗ ಎಲ್ಲವನ್ನು ಬಾಯ್ಬಿಡುತ್ತೇನೆ ಎಂದರು.

See also  ಬೆಂಕಿ ಅವಘಡದಲ್ಲಿ ಮೃತರಾದ ಕುಟುಂಬಕ್ಕೆ 5ಲಕ್ಷ ಪರಿಹಾರ ಘೋಷಣೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು