ಬೆಂಗಳೂರು: ಮಾನವ ನಿರ್ಮಿತ ತಪ್ಪುಗಳಿಂದಾಗಿಯೇ ಪ್ರಕೃತಿ ವಿಕೋಪಗಳು ಸಂಭವಿಸುತ್ತಿದೆ ಎಂದು ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಅವರು ಅಭಿಪ್ರಾಯಪಟ್ಟಿದ್ದಾರೆ.
ಕೇರಳ ಮತ್ತು ಕೊಡಗಿನಲ್ಲಿ ಮಳೆಯಿಂದಾಗಿ ಸಂಭವಿಸುತ್ತಿರುವ ಅನಾಹುತವನ್ನು ಉಲ್ಲೇಖಿಸಿದ ನ್ಯಾಯಮೂರ್ತಿಗಳು, ಇದು ಏಕಾಏಕಿ ಆಗಿಲ್ಲ. ಭೂಕಂಪನವಾದರೆ ಏಕಾಏಕಿ ಆಗಿದೆ ಎಂದು ಹೇಳಬಹುದು. ಆದರೆ ಇದು ಮಾನವ ನಿರ್ಮಿತ ತಪ್ಪುಗಳಿಂದಾಗಿ ಸಂಭವಿಸಿದೆ ಎಂದು ಅವರು ಹೇಳಿದರು.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಣಜಾರು ಗ್ರಾಮದಲ್ಲಿರುವ ಕ್ವಾರಿಯಿಂದಾಗಿ ಸಮೀಪದಲ್ಲೇ ಇರುವ ಹಳ್ಳ ಕಲುಷಿತವಾಗಿದೆ ಎಂಬ ಪ್ರಕರಣದ ವಿಚಾರಣೆ ವೇಳೆ ಮಹೇಶ್ವರಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.