News Kannada
Friday, October 07 2022

ಬೆಂಗಳೂರು ನಗರ

ನಾಳೆಯಿಂದ ಬೆಂಗಳೂರಿನ ಗೋವಿಂದರಾಜನಗರ ವಾರ್ಡ್‍ನಲ್ಲಿ ಉಚಿತ ವೈಫೈ ಲಭ್ಯ - 1 min read

Photo Credit :

ನಾಳೆಯಿಂದ ಬೆಂಗಳೂರಿನ ಗೋವಿಂದರಾಜನಗರ ವಾರ್ಡ್‍ನಲ್ಲಿ ಉಚಿತ ವೈಫೈ ಲಭ್ಯ

ಬೆಂಗಳೂರು: ನಗರದ ಗೋವಿಂದರಾಜನಗರ ವಾರ್ಡ್‍ನಲ್ಲಿ ಉಚಿತ ವೈಫೈ ಸೌಲಭ್ಯವನ್ನು ಕಲ್ಪಿಸಲಾಗಿದ್ದು, ಇದು ದೇಶದಲ್ಲೇ ಪ್ರಥಮ ಎಂದು ಹೇಳಲಾಗುತ್ತಿದೆ. ಭಾನುವಾರ(ಸೆ.23) ಇದಕ್ಕೆ ಚಾಲನೆ ನೀಡಲಾಗುತ್ತಿದೆ.

ಈ ಸೌಲಭ್ಯವನ್ನು ಕಲ್ಪಿಸುವಲ್ಲಿ ಮಾಜಿ ಸಚಿವ ಹಾಗೂ ಶಾಸಕ ವಿ.ಸೋಮಣ್ಣ ಹಾಗೂ ಪಾಲಿಕೆ ಸದಸ್ಯ ಉಮೇಶ್ ಶೆಟ್ಟಿ ಅವರ ಶ್ರಮವಿದೆ ಎಂದು ಹೇಳಲಾಗುತ್ತಿದೆ. ಸದ್ಯ ಈ ವಾರ್ಡ್‍ನಲ್ಲಿ ಹೈಟೆಕ್ ಸೌಲಭ್ಯವುಳ್ಳ ಪಾಲಿಕೆ ಸೌಧ, ಮಾದರಿ ಪಾದಚಾರಿ ಮಾರ್ಗ, ಅತ್ಯಾಧುನಿಕ ಕ್ರೀಡಾ ಸಂಕೀರ್ಣ, ವಿನೂತನ ಬಸ್ ನಿಲ್ದಾಣವಿದ್ದು ಇದೀಗ ಪ್ರಪ್ರಥಮ ಬಾರಿಗೆ ಉಚಿತ ವೈಫೈ ಸೌಲಭ್ಯವೂ ಸೇರ್ಪಡೆಗೊಂಡಿದೆ.

ಹಲವು ರೀತಿಯಲ್ಲಿ ಮುಂದುವರೆದಿರುವ ಗೋವಿಂದರಾಜನಗರ ವಾರ್ಡ್ ನಗರದ 198 ವಾರ್ಡ್‍ಗಳಲ್ಲಿ ಮಾದರಿ ವಾರ್ಡ್ ಎಂಬ ಖ್ಯಾತಿಗೂ ಪಾತ್ರವಾಗಿದೆ. ನಗರದ ಪ್ರತಿಷ್ಟಿತ ಪ್ರದೇಶವಾದ ಎಂ.ಜಿ.ರಸ್ತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇದುವರೆಗೂ ಉಚಿತ ವೈಫೈ ಸೇವೆ ನೀಡಲು ಸಾಧ್ಯವಾಗಿಲ್ಲ. ಹೀಗಿರುವಾಗ ಆದರೆ ಗೋವಿಂದರಾಜನಗರ ವಾರ್ಡ್ ಇನ್ನು ಮುಂದೆ ಉಚಿತ ವೈಫೈ ವಾರ್ಡ್ ಆಗಲಿದ್ದು, ಈ ವಾರ್ಡ್‍ನಲ್ಲಿ ಸಂಚರಿಸುವ ಪ್ರತಿಯೊಬ್ಬ ನಾಗರಿಕರೂ ಪ್ರತಿನಿತ್ಯ ಒಂದು ಜಿಬಿ ಡಾಟಾ ಬಳಕೆ ಮಾಡಿಕೊಳ್ಳಬಹುದಾಗಿದೆ. ಅದೇ ರೀತಿ ವಾರ್ಡ್‍ನಲ್ಲಿ ವಿನೂತನವಾದ ಬಸ್ ನಿಲ್ದಾಣ ಮತ್ತು ಮಾದರಿ ಪಾದಚಾರಿ ಮಾರ್ಗ ನಿರ್ಮಿಸಲಾಗಿದ್ದು, ಈ ಎರಡೂ ಸ್ಥಳಗಳಲ್ಲೂ ಉಚಿತ ವೈಫೈ ಅಳವಡಿಕೆ ಮಾಡಲಾಗಿದೆ.

ಕಟ್ಟಡದ ಮುಂಭಾಗ ನಾಡಪ್ರಭು ಕೆಂಪೇಗೌಡರ ಅಶ್ವರೂಢ ಪ್ರತಿಮೆ ಸ್ಥಾಪನೆ ಮಾಡಲಾಗಿದ್ದು, ಕಚೇರಿ ಆವರಣದಲ್ಲೇ ಜನರಿಕ್ ಔಷಧಿ ಮಳಿಗೆ ಇರುವುದರಿಂದ ಸುಂದರ ಮತ್ತು ಹೈಟೆಕ್ ಸೌಲಭ್ಯವುಳ್ಳ ನಂ.1 ವಾರ್ಡ್ ಕಚೇರಿ ಎಂಬ ಹೆಗ್ಗಳಿಕೆಗೆ ಪಾಲಿಕೆ ಸೌಧ ಭಾಜನವಾಗಲಿದೆ.

ಪಾಲಿಕೆ ಸೌಧದ ಕೂಗಳತೆಯ ದೂರದಲ್ಲಿ ಅಟಲ್ ಜೀ ಶಕ್ತಿ ಸೌಧ ಕ್ರೀಡಾ ಸಂಕೀರ್ಣ ನಿರ್ಮಿಸಲಾಗಿದ್ದು, ಈ ಕಟ್ಟಡದಲ್ಲಿ ಬ್ಯಾಡ್ಮಿಂಟನ್, ಕೆರಂ, ಚೆಸ್, ಜಿಮ್ ಹಾಗೂ ವಿವಿಧ ಕ್ರೀಡೆಗಳನ್ನಾಡಲು ಅತ್ಯಾಧುನಿಕ ಒಳಾಂಗಣ ಕ್ರೀಡಾಂಗಣ ನಿರ್ಮಿಸಲಾಗಿದೆ. ವಾರ್ಡ್‍ನ ಎರಡು ಕಡೆ ವಿನೂತನ ಬಸ್ ನಿಲ್ದಾಣ ನಿರ್ಮಿಸಲಾಗಿದ್ದು, ನಿಲ್ದಾಣ ಸಮೀಪದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ಒಟ್ಟಾರೆ ಎಲ್ಲಾ ಸೌಲಭ್ಯಗಳನ್ನು ಒಳಗೊಂಡ ಮಾದರಿ ವಾರ್ಡ್ ಎಂಬ ಕೀರ್ತಿಗೆ ಪಾತ್ರವಾಗಿರುವ ಗೋವಿಂದರಾಜನಗರದಲ್ಲಿ ಭಾನುವಾರ ಈ ಎಲ್ಲ ಸೌಲಭ್ಯಗಳನ್ನು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳ ದಿವ್ಯಸಾನಿಧ್ಯದಲ್ಲಿ ಶಾಸಕ ಸೋಮಣ್ಣ ಅವರು ಲೋಕಾರ್ಪಣೆ ಮಾಡಲಿದ್ದಾರೆ. ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ನಿರ್ಮಲಾ ಸೀತಾರಾಮನ್, ಡಿಸಿಎಂ ಡಾ.ಜಿ.ಪರಮೇಶ್ವರ್, ಮೇಯರ್ ಜಿ.ಸಂಪತ್‍ರಾಜ್,ಉಪಮೇಯರ್ ಪದ್ಮಾವತಿ ನರಸಿಂಹಮೂರ್ತಿ ಸೇರಿದಂತೆ ಹಲವಾರು ಪ್ರಮುಖರು ಭಾಗವಹಿಸಲಿದ್ದಾರೆ.

See also  ರಸೆಲ್ ಮಾರುಕಟ್ಟೆಯಲ್ಲಿ ಒತ್ತುವರಿ ತೆರವು ಕಾರ್ಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು