News Kannada
Sunday, September 25 2022

ಬೆಂಗಳೂರು ನಗರ

ಪ್ರಿಯಕರಣ ಜತೆ ಸೇರಿ ಪತಿಯ ಕುತ್ತಿಗೆ ಬಿಗಿದ ಪತ್ನಿ - 1 min read

Photo Credit :

ಪ್ರಿಯಕರಣ ಜತೆ ಸೇರಿ ಪತಿಯ ಕುತ್ತಿಗೆ ಬಿಗಿದ ಪತ್ನಿ

ಬೆಂಗಳೂರು: ಪ್ರಿಯಕರಣ ಜತೆ ಸೇರಿ ಪತಿಯನ್ನು ಕೊಂದು ಪೊಲೀಸರ ಬಳಿ ದರೋಡೆಕೋರರು ಹಣಕ್ಕಾಗಿ ಪತಿಯನ್ನು ಸಾಯಿಸಿದ್ದಾರೆ ಎಂದು ಕತೆ ಕಟ್ಟಿದ ಪತ್ನಿ ಇದೀಗ ಪ್ರಿಯಕರಣ ಜತೆ ಜೈಲು ಸೇರಿದ್ದಾಳೆ.

ಮೃತ ಪತಿ ಸಗಾಯ್ ಈತನ ಪತ್ನಿ ಮಮತಾ ಹಾಗೂ ಪ್ರಿಯಕರ ಅಪ್ಪು ಜೈಲು ಸೇರಿದ ವ್ಯಕ್ತಿಗಳು.

ಘಟನೆ ಹಿನ್ನೆಲೆ: ಸೆ.19ರಂದು ವೀರಸಾಗರ ಗ್ರಾಮದಿಂದ ರಾಮಗೊಂಡನಹಳ್ಳಿಗೆ ಹೋಗುವ ರಸ್ತೆಯಲ್ಲಿ ಸಗಾಯ್ ರಾಜ್ ಅವರ ಮೃತದೇಹ ಪತ್ತೆಯಾಗಿತ್ತು. ಅವರ ಕುತ್ತಿಗೆಯಲ್ಲಿ ಗಾಯದ ಗುರುತು ಇದ್ದಿದ್ದರಿಂದ ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಮೃತ ಸಗಾಯ ಸಂಬಂಧಿಕರ ವಿಚಾರಣೆ ವೇಳೆ ಆತನ ಪತ್ನಿ ಮಮತಾ ಹಾಗೂ ಅಪ್ಪು ಎಂಬಾತನಿಗೆ ಸಂಬಂಧವಿರುವುದು ತಿಳಿದು ಬಂದಿದೆ. ಮೊದಲು ಅಪ್ಪುನನ್ನು ಪೊಲೀಸ್ ತನಿಖೆಗೆ ಒಳಪಡಿಸಿದಾಗ ಮಮತಾ ಜತೆ ಸೇರಿ ಸಗಾಯ್ ಕೊಲೆ ಮಾಡಿರುವುದಾಗಿ ಹೇಳಿಕೆಯನ್ನು ನೀಡಿದ್ದಾನೆ.

ಬಿಬಿಎಂಪಿ ಪೌರಕಾರ್ಮಿಕನಾದ ಅಪ್ಪು, ಪತ್ನಿ ಹಾಗೂ ಇಬ್ಬರು ಮಕ್ಕಳ ಜತೆ ಯಶವಂತಪುರದಲ್ಲಿ ವಾಸವಾಗಿದ್ದ. ಮಮತಾ ಕೂಡ ಅದೇ ಪ್ರದೇಶದಲ್ಲಿದ್ದು, ಇಬ್ಬರೂ ಪ್ರೀತಿಸುತ್ತಿದ್ದರೂ. ಈ ವಿಚಾರ ತಿಳಿದು ಮಮತಾ ಪೋಷಕರು ವೀರಸಾಗರ ಗ್ರಾಮದ ಸಗಾಯ್ ಜತೆ ಮದುವೆ ಮಾಡಿದ್ದರು.ಆದರೂ ಮಮತಾ ಹಾಗೂ ಅಪ್ಪು ನಡುವಿನ ಸಂಬಂಧ ಮುಂದುವರೆದಿತ್ತು.

ಗಂಡ ಈ ವಿಚಾರಕ್ಕೆ ನನನ್ನು ಪದೇ ಪದೇ ಪ್ರಶ್ನಿಸುತ್ತಿದ್ದ. ಇದರಿಂದ ಕೋಪ ಬಂದು ಅವರನ್ನು ಕೊಲ್ಲಲು ಸಂಚು ರೂಪಿಸಿದ್ದಾಗಿ ಮಮತಾ ಪೊಲೀಸರಿಗೆ ಹೇಳಿಕೆಯನ್ನು ನೀಡಿದ್ದಾರೆ.

See also  ಮುಂಬರುವ ಚುನಾವಣೆ ಬಿಜೆಪಿ ಸಿದ್ಧತೆ: ತಿಂಗಳಾಂತ್ಯಕ್ಕೆ ಪ್ರಚಾರ ಸಮಿತಿ ರಚನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು