ಬೆಂಗಳೂರು: ರಾಜ್ಯದ ಕೆಲವೊಂದು ಜಿಲ್ಲೆಗಳಲ್ಲಿ ಕಳೆದೆರಡು ದಿನಗಳಿಂದ ಭಾರೀ ಚಳಿ ದಾಖಲಾಗಿರುವ ಬಗ್ಗೆ ವರದಿಗಳು ಹೇಳಿವೆ.
ಮೈಸೂರು, ವಿಜಯಪುರ, ಧಾರವಾಡ, ಹಾವೇರಿ, ಚಾಮರಾಜನಗರ, ದಾವಣಗೆರೆಯಲ್ಲಿ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಮಂಗಳವಾರ ಕನಿಷ್ಠ 11.8 ತಾಪಮಾನ ದಾಖಲಾಗಿದೆ.
ಇದರಿಂದ ಸುಮರು 121 ವರ್ಷಗಳ ಇತಿಹಾಸದ ದಾಖಲೆಯನ್ನು ಈ ವರ್ಷ ಚಳಿ ಮುರಿದಿದೆ. 1897ರ ಅ.31ರಂದು 12.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಮೈಸೂರಿನಲ್ಲಿ 11.2 ಡಿಗ್ರಿ ದಾಖಲಾಗಿದೆ. ಚಾಮರಾಜನಗರ 12 ಡಿಗ್ರಿ, ದಾವಣಗೆರೆ 12.3 ಡಿಗ್ರಿ ಮತ್ತು ಹಾವೇರಿಯಲ್ಲಿ 13 ಡಿಗ್ರಿ ಉಷ್ಣಾಂಶ ದಾಖಲಾಗಿದೆ.