News Kannada
Sunday, November 27 2022

ಬೆಂಗಳೂರು ನಗರ

ನಟಿ ರಮ್ಯಾ ರಾಜಕೀಯ ನಡೆ ಬಗ್ಗೆ ಭಾರೀ ಕುತೂಹಲ - 1 min read

Photo Credit :

ನಟಿ ರಮ್ಯಾ ರಾಜಕೀಯ ನಡೆ ಬಗ್ಗೆ ಭಾರೀ ಕುತೂಹಲ

ಬೆಂಗಳೂರು: ಎಐಸಿಸಿ ಸಾಮಾಜಿಕ ಜಾಲತಾಣಗಳ ವಿಭಾಗದ ಮುಖ್ಯಸ್ಥೆಯಾಗಿದ್ದ ರಮ್ಯಾ ಅವರು ಕಳೆದ ಕೆಲವು ತಿಂಗಳಿಂದ ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳದೆ ನಾಪತ್ತೆಯಾಗಿರುವುದು ಭಾರೀ ಕುತೂಹಲ ಮೂಡಿಸಿದೆ.

ಕಾಂಗ್ರೆಸ್ ನಾಯಕ ಆನಂದ್ ಶರ್ಮಾ ನೇತೃತ್ವದಲ್ಲಿ ನಡೆದ ಪಕ್ಷದ ಪ್ರಚಾರ ಸಮಿತಿ ಸಭೆಗೆ ಕೂಡ ರಮ್ಯಾ ಅವರು ಹಾಜರಾಗಿಲ್ಲ. ಇದರಿಂದಾಗಿ ಅವರು ಎಲ್ಲಿದ್ದಾರೆ ಮತ್ತು ಅವರ ಮುಂದಿನ ನಡೆ ಏನು ಎನ್ನುವ ಬಗ್ಗೆ ಎಲ್ಲರಿಗೂ ಕುತೂಹಲ ಕಾಡಿದೆ.

ಮುಂದಿನ ಲೋಕಸಭೆ ಚುನಾವಣೆಗೆ ರಚಿಸಲಾಗಿರುವಂತಹ ಪ್ರಚಾರ ಸಮಿತಿಗೆ ರಮ್ಯಾ ಅವರನ್ನು ಕೂಡ ಆಯ್ಕೆ ಮಾಡಲಾಗಿದೆ. ಆದರೆ ಈಗ ರಮ್ಯಾ ಅವರು ಪಕ್ಷದ ಸಭೆಗೂ ಹಾಜರಾಗದಿರುವುದು ಕಾರ್ಯಕರ್ತರಲ್ಲಿ ಬೇಸರ ಮೂಡಿಸಿದೆ.

ಎಐಸಿಸಿ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆಯಾಗಿದ್ದ ರಮ್ಯಾ ಅವರು ಕೆಲವು ತಿಂಗಳ ಮೊದಲು ಟ್ವಿಟರ್ ಖಾತೆಯಿಂದ ಇದನ್ನು ತೆಗೆದುಹಾಕಿದ್ದರು. ಆದರೆ ಇದರ ಕೆಲವು ದಿನಗಳ ಬಳಿಕ ಮತ್ತೆ ಅದೇ ಪ್ರೊಪೈಲ್ ಹಾಕಿಕೊಂಡಿದ್ದರು.

See also  ಭಾರತದ ಹತ್ತಿ ಮೇಲಿನ ನಿರ್ಬಂಧ ತೆರವುಗೊಳಿಸುವಂತೆ ಪಾಕ್ ಮನವಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು