ಬೆಂಗಳೂರು: ಸಿಎಂ ಕುಮಾರಸ್ವಾಮಿ ಅವರು ಬಜೆಟ್ ಮಂಡನೆಗೂ ಮುನ್ನಾ ತುರ್ತು ಪತ್ರಿಕಾಗೋಷ್ಠಿಯನ್ನು ಕರೆದು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರು ಮೈತ್ರಿ ಸರ್ಕಾರದ ಶಾಸಕರಿಗೆ ಆಮಿಷವೊಡ್ಡಿ ಸೆಳೆಯಲು ಯತ್ನಿಸುತ್ತಿರುವ ಆಡಿಯೋವನ್ನು ಬಿಡುಗಡೆ ಮಾಡಿದರು.
ಅಪರೇಷನ್ ಕಮಲದ ಸಾಕ್ಷ್ಯ ಬಿಡುಗಡೆ ಮಾಡುವುದಾಗಿ ಹೇಳಿದ ಸಿಎಂ ಅವರು ನನ್ನಲ್ಲಿ ಆಡಿಯೋ ಸಾಕ್ಷ್ಯವಿದೆ ಎಂದು ಹೇಳಿ 40 ನಿಮಿಷಗಳ ಆಡಿಯೋ ಕ್ಲಿಪ್ ಬಿಡುಗಡೆ ಮಾಡಿದರು.
ಆಪರೇಷನ್ ಕಮಲದ ಹಿಂದೆ ಮೋದಿ, ಅಮಿತ್ ಶಾ ಅವರ ಕೈವಾಡವಿದೆ. ಈ ಸಂಬಂಧ ಸ್ಪೀಕರ್ ಅವರಿಗೆ ಪತ್ರ ಬರೆದು ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡುತ್ತೇನೆ ಎಂದು ಹೇಳಿದರು.
ಗುರುಮಟಕಲ್ ಕ್ಷೇತ್ರದ ಶಾಸಜ ನಾಗನಗೌಡ ಪಾಟೀಲರ ಮಗ ಶರಣಗೌಡ ಅವರು ಬಿಎಸ್ ವೈ ವಿರುದ್ಧ ಹಣದ ಮಿಷವೊಡ್ಡಿದ ಆರೋಪ ಮಾಡಿದ್ದಾರೆ.
ಆಡಿಯೋದಲ್ಲಿ ಹಣಕಾಸಿನ ವಿಚಾರವನ್ನು ವಿಜಯೇಂದ್ರ ನೋಡಿಕೊಳ್ಳುತ್ತಾರೆ. 50ಕೋಟಿ ಹಣ ನೀಡಿ ಸ್ಪೀಕರ್ ಅವರನ್ನೇ ಬುಕ್ ಮಾಡಿದ್ದೀನಿ. ನೀವು ಬನ್ನಿ ಎಂದು ಬಿಎಸ್ ವೈ ಹೇಳಿರುವ ಆಡಿಯೋವನ್ನು ಬಿಡುಗಡೆ ಮಾಡಲಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಬಿಎಸ್ ವೈ ಯಡಿಯೂರಪ್ಪ ಅವರು, ಶರಣಗೌಡ ಅವರ ಜತೆ ಮಾತನಾಡಿದ್ದೇನೆ ಎಂದು ಗೊಂದಲ ಸೃಷ್ಟಿಸುವುದು ಕುಮಾರಸ್ವಾಮಿ ಅವರ ದ್ದೇಶ. ನಾನು ಸ್ಪೀಕರ್ ಬಗ್ಗೆ ಮಾತನಾಡಿರುವುದಯ ನಿಜವಾದರೆ, ಕುಮಾರಸ್ವಾಮಿ ಆರೋಪ ಸಾಬೀತಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎಂದರು.
ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ. ರಾಜ್ಯದಲ್ಲಿ 150ಕ್ಕೂ ಹೆಚ್ಚು ತಾಲ್ಲೂಕುಗಳಲ್ಲಿ ಬರ. ಜನರಿಗೆ ಸಾಲಮನ್ನಾ ಆಸೆ ತೋರಿಸಿ ರೈತರ ಕಣ್ಣಿಗೆ ಮಣ್ಣೆರಿಚಿದ್ದೀರಿ. ಒಂದೇ ಕಂತಿನಲ್ಲಿ 48 ಸಾವಿರ ಕೋಟಿ ನೀಡುತ್ತೇನೆ ಎಂದಿದ್ದರಿ ಅದಕ್ಕೆ ಉತ್ತರ ನೀಡಿ ಎಂದರು.