News Kannada
Monday, November 28 2022

ಬೆಂಗಳೂರು ನಗರ

ಸಿಎಂ ಕುಮಾರಸ್ವಾಮಿಯಿಂದ ಬಜೆಟ್ ಮಂಡನೆ: ಬಿಜೆಪಿ ಸಭಾತ್ಯಾಗ - 1 min read

Photo Credit :

ಸಿಎಂ ಕುಮಾರಸ್ವಾಮಿಯಿಂದ ಬಜೆಟ್ ಮಂಡನೆ: ಬಿಜೆಪಿ ಸಭಾತ್ಯಾಗ

ಬೆಂಗಳೂರು: ಬಜೆಟ್ ಪುಸ್ತಕ ನೀಡದ ಕಾರಣ ಬಿಜೆಪಿಯು ಬಜೆಟ್ ಮಂಡನೆ ನಡುವೆಯೇ ಸಭಾತ್ಯಾಗ ಮಾಡಿದೆ. ಮೈತ್ರಿ ಸರ್ಕಾರ ಇಂದು ತಮ್ಮ ಎರಡನೇ ಬಜೆಟ್ ನ್ನು ಸಿಎಂ ಕುಮಾರಸ್ವಾಮಿ ಅವರು ಮಂಡಿಸುತ್ತಿದ್ದಾರೆ.

ಬರಪೀಡಿತ ಜಿಲ್ಲೆಗಳಾದ ಕೋಲಾರ, ಚಿಕ್ಕಾಬಳ್ಳಾಪುರ, ಹಾಸನ, ತುಮಕೂರು ಜಿಲ್ಲೆಗಳಿಗೆ ಎತ್ತಿನ ಹೊಳೆ ಯೋಜನೆಗೆ ಜಾರಿಗೆ ಕ್ರಮ. ರಸ್ತೆ ಅಭಿವೃದ್ಧಿಗೆ 10ಸಾವಿರ ಕೋಟಿ ರೂಪಾಯಿ.

ಬಜೆಟ್ ನಲ್ಲಿ ಏನೇನಿದೆ: 

ಹೊಸ ತಾಲ್ಲೂಕು ಘೋಷಣೆ: ರಾಮನಗರ ಜಿಲ್ಲೆ ಹಾರೋಹಳ್ಳಿ, ಚಿಕ್ಕಮಗಳೂರು ಜಿಲ್ಲೆ ಕಳಸ, ಚಿಕ್ಕಬಳ್ಳಾಪುರ ಜಿಲ್ಲೆ ಚೇಳೂರು, ಬಾಗಲಕೋಟೆ ಜಿಲ್ಲೆ ತೇರದಾಳ.

ಬೆಂಗಳೂರಿನ 5ಲಕ್ಷ ಬೀದಿ ದೀಪಗಳನ್ನು ಎಲ್ ಇಡಿ ಆಗಿಸುವುದು.

ಸಿರಿಧಾನ್ಯ ಬೆಳೆಯುವ ರೈತರಿಗೆ 10ಸಾವಿರ ಪ್ರೋತ್ಸಾಹ ಧನ.

ಉತ್ತರ ಮತ್ತು ದಕ್ಷಿಣ ಕರ್ನಾಟಗಳಲ್ಲಿ ಕೃಷಿ ಪ್ರಾತ್ಯಕ್ಷಿಕೆ ಕೇಂದ್ರಗಳನ್ನು ಆರಂಭ.

ಮಂಡ್ಯದ ವಿಸಿ ಫಾರಂ, ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಕೇಂದ್ರಗಳ ಸ್ಥಾಪನೆ.

ರಾಮನಗರ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಮಾವು ಸಂಸ್ಕರಣಾ ಕೋಲಾರದಲ್ಲಿ  ಟೊಮೆಟೋ ಸಂಸ್ಕರಣಾ ಘಟಕ ಸ್ಥಾಪನೆ. ಒಟ್ಟು 20ಕೋಟಿ ಅನುದಾನ.

ಜೇನು ಸಾಕಾಣಿಕೆ ಉತ್ತೇಜನಕ್ಕೆ 5 ಕೋಟಿ, ದಾಳಿಂಬೆ ಬೆಳೆಗಾರರಿಗೆ 150 ಕೋಟಿ ಅನುದಾನ.

ಮಿಟಿ ಸೌತೆ ಉತ್ತೇಜನಕ್ಕೆ 6 ಕೋಟಿ ಅನುದಾನ.

ರೇಷ್ಮೆ ಸಾಕಾಣಿಕೆ ಕೇಂದ್ರದ ಪುನಶ್ಚೇತನಕ್ಕೆ 5 ಕೋಟಿ ಅನುದಾನ. ಮಲ್ಪೆಯಲ್ಲಿ ಜೆಟ್ಟಿ ಮತ್ತು ತ್ಯಾಜ್ಯ ನಿರ್ವಹಣಾ ಘಟಕ ಅಭಿವೃದ್ಧಿ.

ಹಾಲು ಉತ್ಪಾದರಸಹಕಾರ ಸಂಘಗಳಿಗೆ 1 ಲಕ್ಷ ಅನುದಾನ.

 100 ಕೋಟಿ ವೆಚ್ಚದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳ ಸಮಗ್ರ ಅಭಿವೃದ್ಧಿ.

ಕೊಪ್ಪಳ ನೀರಾವರಿಗೆ 200 ಕೋಟಿ ಮೀಸಲು

ಬಿಯರ್ ಮೇಲಿನ ಅಬಕಾರಿ ಸುಂಕ ಹೆಚ್ಚಳ

ಚಿಕ್ಕಮಗಳೂರಿನಲ್ಲಿ 50 ಕೋಟಿ ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ.
ಐದು ಮೊರಾರ್ಜಿ ದೇಸಾಯಿ ಹೆಣ್ಣು ಮಕ್ಕಳ ಶಿಕ್ಷಣ ಕೇಂದ್ರ ಸ್ಥಾಪನೆ.

ಆಟೋ ಚಾಲಕರಿಗೆ ಗುಂಪು ವಿಮೆ ಘೋಷಣೆ

 

 

See also  ಒಂದು ಹನಿಯೂ ವ್ಯರ್ಥವಾಗದಂತೆ ಮುತುವರ್ಜಿವಹಿಸಿ: ಜಲತಜ್ಞ ಆಬಿಡ್‌ ಸುರ್ತಿ ಕರೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು