ಬೆಂಗಳೂರು: ಮೊಬೈಲ್ ಆಪ್ ಆಧಾರಿತ ಟ್ಯಾಕ್ಸಿ ಸೇವೆ ಒದಗಿಸುತ್ತಿದ್ದ ಓಲಾ ಕಂಪನಿ ಪರವಾನಗಿ ಅಮಾನತು ಆದೇಶ ಹಿಂಪಡೆಯಲು ಸರ್ಕಾರ ತೀರ್ಮಾನಿಸಿದ್ದು, ಆ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದ್ದಾರೆ.
ಇಂದಿನಿಂದ ಎಂದಿನಂತೆ ಓಲಾ ಕಂಪನಿ ಕ್ಯಾಬ್ ಗಳು ಓಡಾಡಲಿವೆ. ಆದಾಗ್ಯೂ ನೀತಿಗಳನ್ನು ಹೊಸ ತಂತ್ರಜ್ಞಾನಗಳೊಂದಿಗೆ ತುರ್ತಾಗಿ ಬದಲಿಸಿಕೊಳ್ಳಬೇಕಾದ ಅವಶ್ಯಕತೆ ಇದೆ.
ಜತೆಗೆ ಸರ್ಕಾರಗಳು ಹೊಸ ನೀತಿಗಳು ಜಾರಿಗೊಳಿಸಲು ಕೈಗಾರಿಕೆಗಳೂ ಸರ್ಕಾರದೊಟ್ಟಿಗೆ ಕಾರ್ಯನಿರ್ವಹಿಸಬೇಕಾಗುತ್ತದೆ ಎಂದು ಸಚಿವರು ಟ್ವೀಟ್ ಮಾಡಿದ್ದಾರೆ. ಹೀಗಾಗಿ ಓಲಾ ಕಂಪನಿ ಕ್ಯಾಬ್ ಹಾಗೂ ಎಂದಿನಂತೆ ಓಡಾಟಗಳನ್ನು ನಡೆಸಲಿವೆ ಎಂದರು.