ಬೆಂಗಳೂರು: ನನ್ನ ಹಾಗೂ ಬೆಂಬಲಿಗರ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸಲು ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ತಮ್ಮ ಪಕ್ಷದ ಕೆಲವರನ್ನು “ಛೂ’ ಬಿಟ್ಟಿದ್ದಾರೆ ಎಂದು ಸಿಎಂ ವಿರುದ್ಧ ಸುಮಲತಾ ಅವರು ಗಂಭೀರವಾಗಿ ಆರೋಪಿಸಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮೆಲ್ಲರ ಫೋನ್ ಟ್ಯಾಪ್ ಮಾಡಲಾಗುತ್ತಿದ್ದು, ನಮ್ಮ ಮನೆಗೆ ಹಾಗೂ ನನ್ನನ್ನು ಭೇಟಿಯಾಗುವವರ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಈ ರೀತಿಯ ಕೀಳು ಮಟ್ಟದ ರಾಜಕೀಯನ್ನು ಮುಖ್ಯಮಂತ್ರಿಯಾದವರು ಮಾಡುವುದು ಸರಿಯಲ್ಲ ಎಂದರು.
ಅಂಬರೀಶ್ ಹೆಸರು ಬಳಸಿ ಸಿಎಂ ಕುಮಾರಸ್ವಾಮಿ ಅವರು ರಾಜಕಾರಣ ಮಾಡುವುದು ಬೇಡ. ನಾನ ಅಂಬರೀಶ್ ಹೆಸರನ್ನು ಬಂಡವಾಳ ಅಂದುಕೊಂಡಿಲ್ಲ. ಆದರೆ ನನ್ನ ಹೆಸರು ಜತೆಗೆ ಅಂಬರೀಶ್ ಇದ್ದಾರೆ. ಅದನ್ನು ಯಾರಿಂದಲೂ ಬೇರ್ಪಡಿಸಲು ಸಾಧ್ಯವಿಲ್ಲ ಎಂದರು.