ಬೆಂಗಳೂರು: ಇಲ್ಲಿನ ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದ ಬಳಿ ವಿಷ ಆಹಾರ ಸೇವಿಸಿ ನೂರಾರು ಪಾರಿವಾಳಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.
ಇನ್ನೂ ಆಹಾರ ಸೇವಿಸಿದ್ದ 50ಕ್ಕೂ ಅಧಿಕ ಪಾರಿವಾಳಗಳ ಸ್ಥಿತಿ ಚಿಂತಾಜನಕವಾಗಿದೆ.
ಪಕ್ಷಿಗಳಿಗೆ ಆಹಾರ ನೀಡುವ ನೆಪದಲ್ಲಿ ದುಷ್ಕರ್ಮಿಗಳು ಆಹಾರದಲ್ಲಿ ವಿಷ ಬೆರೆಸಿದ ಪರಿಣಾಮ ಪಾರಿವಾಳಗಳು ಸಾವನ್ನಪ್ಪಿದೆ ಎಂದು ಸ್ಥಳೀಯರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.