ಬೆಂಗಳೂರು: ಕಲಬುರ್ಗಿ ಸಂಸದ ಡಾ.ಉಮೇಶ್ ಜಾಧವ್ ಅವರು ಸಂಸತ್ ಪ್ರವೇಶಿಸುವ ಮುನ್ನಾ ಧ್ವಾರದ ಬಳಿ ಸಾಷ್ಟಾಂಗ ನಮಸ್ಕಾರ ಮಾಡಿದ್ದು ಇದೀಗ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಹಿಂದೆ ಹಲವು ನಾಯಕರು ತಲೆಭಾಗಿ ಸಂಸತ್ ಗೆ ಒಳಪ್ರವೇಶಿದ್ದು ಅನೇಕ ನಿದರ್ಶನಗಳಿವೆ. ಆದರೆ ಜಾಧವ್ ಅವರು ಸಾಷ್ಟಾಂಗ ನಮಸ್ಕಾರ ಮಾಡಿ ಸಂಸತ್ ಪ್ರವೇಶಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ ಉಮೇಶ್ ಜಾಧವ್ ಅವರು ಕಲಬುರ್ಗಿ ಲೋಕಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಾಂಗ್ರೆಸ್ ನ ಹಿರಿಯ ನಾಯಕ ಮಲ್ಲಿಕಾರ್ಜುನ ವಿರುದ್ಧ ಸ್ಪರ್ಧಸಿದ್ದರು. ಭಾರೀ ಕುತೂಹಲ ಎಂಬತೆ ಮಲ್ಲಿಕಾರ್ಜುನ ವಿರುದ್ಧ ಜಾಧವ್ ಜಯವನ್ನು ಸಾಧಿಸಿ ಸಂಸತ್ ನ್ನು ಪ್ರವೇಶಿದರು.