ಬೆಂಗಳೂರು: ಸಂಶೋಧಕ, ಖ್ಯಾತ ಹಿರಿಯ ಸಾಹಿತಿ ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯನ್ನು ಎಸ್ ಐಟಿ ತಂಡ ಬಂಧಿಸಿದೆ.
ಬಂಧಿತನನ್ನು ಬೆಳಗಾವಿಯ ಪ್ರವೀಣ್ ಪ್ರಕಾಶ್ ಚತುರ್(27) ಎಂದು ಗುರುತಿಸಲಾಗಿದೆ.
2015ರಲ್ಲಿ ಎಂ.ಎಂ.ಕಲಬುರ್ಗಿಯನ್ನು ಇಬ್ಬರು ದುಷ್ಕರ್ಮಿಗಳು ಅವರ ಮನೆಯಲ್ಲೇ ಗುಂಡಿಟ್ಟು ಕೊಂದಿದ್ದರು.
ಪ್ರಮುಖ ಆರೋಪಿಯಾದ ಬೆಳಗಾವಿಯ ಪ್ರವೀಣ್ ನನ್ನು ಎಸ್ ಐಟಿ ತಂಡ ಬಂಧಿಸಿ ಧಾರವಾಡ ನ್ಯಾಯಾಲಯದ ಮುಂದೆ ಹಾಜರಪಡಿಸಿದೆ. ಈ ಸಂಬಂಧ ಸ್ ಯಟಿ ಮುಖ್ಯಸ್ಥ ಬಿ.ಕೆ.ಸಿಂಗ್ ಅವರು ಬಂಧನವನ್ನು ಖಚಿತಪಡಿಸಿದ್ದಾರೆ.