ಬೆಂಗಳೂರು: ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಪೆಟ್ರೋಲ್- ಡಿಸೇಲ್ ಸೆಸ್ ಹೆಚ್ಚಾಗಿಸುವುದಾಗಿ ಘೋಷಣೆ ಮಾಡಿದ ಮರುದಿನವೇ ದೇಶಾದ್ಯಂತ ಇಂಧನದ ಬೆಲೆ ಏರಿಕೆ ಬಿಸಿ ನಾಗರಿಕರಿಗೆ ತಟ್ಟಿದೆ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪೆಟ್ರೋಲ್ ದರದಲ್ಲಿ 2.45ರೂ, ಡಿಸೇಲ್ ದರದಲ್ಲಿ 2.36 ಏರಿಕೆಯಾಗಿದ್ದು, ಪೆಟ್ರೋಲ್ 72.96 ಹಾಗೂ ಡೀಸೆಲ್ 66.96 ರೂಪಾಯಿಯಾಗಿದೆ.
ಈ ಸಂಬಂಧ ಶುಕ್ರವಾರ ಪ್ರತಿಕ್ರಿಯಿಸಿದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಜಾಗತಿಕ ತೈಲಬೆಲೆ ಕಡಿಮೆಯಾಗುತ್ತಿದ್ದರೂ ಸರ್ಕಾರ ಡೀಸೆಲ್ ಮತ್ತು ಪೆಟ್ರೋಲ್ ಬೆಲೆಯನ್ನು ಎರಡು ರೂಪಾಯಿಗಳಷ್ಟು ಏರಿಕೆಯಾಗಿದೆ.
ಇದರಿಂದ ಸಹಜವಾಗಿಯೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಲಿದೆ. ಸಾರಿಗೆ ದುಬಾರಿಯಾಗಲಿದೆ. ಇದರಿಂದ ಸಾಮಾನ್ಯ ಜನರ ಕಷ್ಟಗಳು, ಹೆಚ್ಚಾಗಲಿವೆ ಎಂದರು.