ಬೆಂಗಳೂರು: ಅಧಿಕೃತವಾಗಿ ಬುಕ್ ಮಾಡಿದ್ದ ಮುಂಬೈ ಹೊಟೇಲ್ ಕೊಠಡಿಯನ್ನು ರದ್ದು ಮಾಡಿದ ಹೊಟೇಲ್ ಆಡಳಿತ ಮಂಡಳಿ ವಿರುದ್ಧ ಕಾನೂನು ಹೋರಾಟ ನಡೆಸಲು ಚಿಂತಿಸಿದ್ದೇನೆ ಎಂದು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರು ಹೇಳಿದರು.
ಇಂದು ಕೆಕೆ ಗೆಸ್ಟ್ ಹೌಸ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಮಹಾರಾಷ್ಟ್ರ ಸರ್ಕಾರಕ್ಕೆ ತಿಳಿಸಿಯೇ ಅಧಿಕೃತವಾಗಿ ಮುಂಬೈ ಗೆ ತೆರಳಿ ಹೊಟೇಲ್ ಕೊಠಡಿ ಬುಕ್ ಮಾಡಿದ್ದು. ಆದರೆ ಹೊಟೇಲ್ ಆಡಳಿತ ಮಂಡಳಿ ಬುಕ್ ಮಾಡಿದ್ದ ರೂಂ ನ್ನು ಕ್ಯಾನ್ಸಲ್ ಮಾಡಿದೆ.
ಈ ಸಂಬಂಧ ನಾನು ಕಾನೂನು ಹೋರಾಟ ನಡೆಸಲು ಚಿಂತಿಸಿದ್ದೇನೆ. ನಿನ್ನೆ ರಾತ್ರಿಯೇ ನಾನು ಬೆಂಗಳೂರಿಗೆ ತಲುಪಿದ್ದೇನೆ. ನಮ್ಮ ಶಾಸಕರನ್ನೂ ಭೇಟಿಯಾಗಲು ಅವಕಾಶ ಮಾಡಿಕೊಡದೆ ಪ್ರಜಾಪ್ರಭುತ್ವ ವಿರೋಧಿ ಕ್ರಮ ಎಂದು ದೂರಿದರು.