ಬೆಂಗಳೂರು: ಮಗಳನ್ನೇ ಮುಂದಿಟ್ಟುಕೊಂಡು ಯುವಕರನ್ನು ಹನಿಟ್ರ್ಯಾಪ್ ಮಾಡಿ ಹಣ ದರೋಡೆ ಮಾಡುತ್ತಿದ್ದ ಪೋಷಕರನ್ನು ಪೊಲೀಸರು ಬಂಧಿಸಿದ್ದಾರೆ.
ತಮ್ಮ ಮಗಳ ಸೆಕ್ಸ್ ವಿಡಿಯೋಗಳನ್ನು ಬಳಸಿಕೊಂಡು ಯುವಕರಿಂದ ಹಣ ವಸೂಲಿ ಮಾಡುತ್ತಿದ್ದ ದಂಪತಿಯನ್ನು ಮಲ್ಲೇಶ್ವರಂನ ಪೊಲೀಸರು ಬಂಧಿಸಿದ್ದಾರೆ.
ಉಪನ್ಯಾಸಕರೊಬ್ಬರನ್ನು ಹೀಗೆ ತಮ್ಮ ಜಾಲಕ್ಕೆ ಕೆಡವಿ ಹಣ ದರೋಡೆ ಮಾಡಿದ್ದರು. ಇದರ ಬಗ್ಗೆ ಉಪನ್ಯಾಸಕರು ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ.
ಲೀನಾ ಕವಿತಾ ಮತ್ತು ಪ್ರಮೋದ್ ಕುಮಾರ್ ಎಂಬವರೇ ಈ ಪ್ರಕರಣದ ಆರೋಪಿಗಳು. ಇವರಿಬ್ಬರು ಸುಮಾರು 42 ಲಕ್ಷ ರೂಪಾಯಿ ದರೋಡೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ತಮ್ಮ ಮಗಳನ್ನೇ ಯುವಕರನ್ನು ಸೆಳೆಯಲು ಬಳಸಿಕೊಂಡಿರುವುದು ಇದು ಮೊದಲ ಪ್ರಕರಣ ಎಂದು ಪೊಲೀಸರು ಹೇಳಿದ್ದಾರೆ.