ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಸಂಬಂಧ ತಿಹಾರ್ ಜೈಲಿನಲ್ಲಿ 29 ದಿನ ಕಳೆದ ಕಾಂಗ್ರೆಸ್ ಶಾಸಕ ಡಿ.ಕೆ.ಶಿವಕುಮಾರ್ ಇಂದು ರಾಜ್ಯಕ್ಕೆ ಆಗಮಿಸಲಿದ್ದಾರೆ.
ಮಧ್ಯಾಹ್ನ ನವದೆಹಲಿಯಿಂದ ವಿಮಾನದ ಮೂಕಲ ಕರ್ನಾಟಕಕ್ಕೆ ವಾಪಾಸ್ಸಾಗಲಿದ್ದು ಡಿಕೆಶಿಯನ್ನು ಅದ್ಧೂರಿಯಾಗಿ ಸ್ವಾಗತಿಸಲು ಕಾಂಗ್ರೆಸ್ ಕಾರ್ಯಕರ್ತರು ಸಿದ್ಧತೆ ನಡೆಸಿದ್ದಾರೆ.
ದೇವನಹಳ್ಳಿ ವಿಮಾನನಿಲ್ದಾಣಕ್ಕೆ ಆಗಮಿಸುವ ಡಿಕೆಶಿಯನ್ನು ಅಲ್ಲಿಂದ್ದ ರ್ಯಾಲಿ ಮುಖಾಂತರ ಕರೆತರಲಾಗುವುದು. ಆನಂತರ ಶಿವಕುಮಾರ್ ಕೆಪಿಸಿಸಿ ಕಚೇರಿಗೆ ತೆರಳಿ ಕಾಂಗ್ರೆಸ್ ನಾಯಕರನ್ನು ಭೇಟಿಯಾಗಲಿದ್ದಾರೆ.
ರ್ಯಾಲಿ ಹಿನ್ನೆಲೆ ದೇವನಹಳ್ಳಿ ಹಾಗೂ ಕ್ಚೀನ್ ರೋಡ್ ನಲ್ಲಿ ವಾಹನ ದಟ್ಟನೆ ಉಂಟಾಗಲಿದೆ. ಮುಂಜಾಗೃತವಾಗಿ ವಾಹನ ಸವಾರರು ಬೇರೆ ದಿಕ್ಕಿನಲ್ಲಿ ಚಲಾಯಿಸುವುದು ಒಳಿತು ಎಂದು ಟ್ರಾಫಿಕ್ ಪೊಲೀಸ್ ತಿಳಿಸಿದ್ದಾರೆ.