ಬೆಂಗಳೂರು: ದೆಹಲಿ ಹೈಕೋರ್ಟ್ ನಿಂದ ಜಾಮೀನು ಪಡೆದು ಬೆಂಗಳೂರಿಗೆ ಇಂದು ಆಗಮಿಸಿದ ಕನಕಪುರ ಶಾಸಕ ಡಿ.ಕೆ.ಶಿವಕುಮಾರ್ ಅವರನ್ನು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತ ಕೋರಿದರು.
ಜೈಕಾರ ಕೂಗುತ್ತಾ ಭಾರೀ ಗಾತ್ರದ ಹೂವಿನ ಮಾಲೆಯನ್ನು ಹಾಕಿ ಡಿಕೆಶಿ ಬಿಡುಗಡೆಯನ್ನು ಸಂಭ್ರಮಿಸಿದರು.
ಅಕ್ರಮ ಹಣ ವರ್ಗಾವಣೆ ಸಂಬಂಧ ಸೆ. 3ರಂದು ಬಂಧಿಯಾಗಿ 39ದಿನಗಳ ಕಾಲ ತಿಹಾರ್ ಜೈಲಿನಲ್ಲಿ ಕಳೆದ ಡಿಕೆಶಿ ಗೆ ಆ ರೋಗ್ಯದ ದೃಷ್ಟಿಯಲ್ಲಿ ಗುರುವಾರ ಹೈಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿದೆ. ಡಿಕೆಶಿ ಆಗಮನದ ಹಿನ್ನೆಲೆ ಬಿಗಿ ಬಂದೋಬಸ್ತ್ ನ್ನು ಮಾಡಲಾಗಿದೆ.