ಬೆಂಗಳೂರು: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ದೀಪಾವಳಿ ಹಬ್ಬವನ್ನು ಪ್ರವಾಹಕ್ಕೆ ತುತ್ತಾದ ಬೆಳಗಾವಿ ಜಿಲ್ಲೆಯಲ್ಲಿ ಹಳ್ಳಿಯ ಸಂತ್ರಸ್ತರೊಂದಿಗೆ ಆಚರಿಸಲಿದ್ದಾರೆ.
ಶನಿವಾರ ಬೆಳಗಾವಿ ಜಿಲ್ಲೆಗೆ ಆಗಮಿಸಿದ ಎಚ್ ಡಿಕೆ ಭಾನುವಾರ ದಿನಪೂರ್ತಿ ಪ್ರವಾಹಕ್ಕೆ ತುತ್ತಾದ ಮಂಜರಿ, ಯದೂರು, ಮಂಗವತಿ,ಇಂಗಲಗೋವಾ ಹಾಗೂ ಇತರ ಹಳ್ಳಿಗಳಿಗೆ ಭೇಟಿ ನೀಡಿ ಸಂತ್ರಸ್ತರ ಜತೆ ಮಾತುಕತೆ ನಡೆಸಲಿದ್ದಾರೆ.
ಈ ವೇಳೆ ನೆರೆ ಸಂತ್ರಸ್ತರೊಂದಿಗೆ ದೀಪಾವಳಿ ಆಚರಿಸಲಿದ್ದಾರೆ.