ಬೆಂಗಳೂರು: ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಎನ್. ವೆಂಕಟಾಚಲ(90) ಅವರು ಬುಧವಾರ ಬೆಳಗ್ಗೆ ನಿಧನರಾದರು.
ಇಂದು ಬೆಳಗ್ಗೆ ನಗರದ ಖಾಸಗಿ ಆಸ್ಪತ್ರೆ ಎಂ.ಎಸ್. ರಾಮಯ್ಯದಲ್ಲಿ ಅವರು ನಿಧನರಾದರು. ಇವರು 2001ರಿಂದ 2006ರ ತನಕ ಲೋಕಾಯುಕ್ತರಾಗಿದ್ದರು.
ವೆಂಕಟಾಚಲ ಅವರು ಲೋಕಾಯುಕ್ತರಾಗಿದ್ದ ವೇಳೆ ಜನರಲ್ಲಿ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸಿದ್ದರು ಮತ್ತು ಲೋಕಾಯುಕ್ತದ ಬಳಿ ಜನರೇ ಬಂದು ದೂರು ನೀಡುವಂತೆ ಮಾಡಿದ್ದರು.