ಬೆಂಗಳೂರು: ರಾಮನಗರ ಪೊಲೀಸರು ಮತ್ತು ಸಿಸಿಬಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಸೈಬರ್ ಕ್ರೈಂನಲ್ಲಿ ಭಾಗಿಯಾದ ನಾಲ್ಕು ನೈಜೀರಿಯಾದ ಪ್ರಜೆಗಳನ್ನು ಬಂಧಿಸಿದ್ದಾರೆ.
ರಾಜ್ಯದೆಲ್ಲೆಡೆಯಲ್ಲಿ ನಡೆದಿರುವಂತಹ ಹಲವಾರು ಸೈಬರ್ ಕ್ರೈಂಗಳಲ್ಲಿ ಇವರು ಭಾಗಿಯಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ.
ಗುಪ್ತಚರ ಇಲಾಖೆಯು ನೀಡಿರುವಂತಹ ಮಾಹಿತಿಯನ್ನು ಅನುಸರಿಸಿಕೊಂಡು ಸಿಸಿಬಿ ಪೊಲೀಸರು ಹಾಗು ರಾಮನಗರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದರು. ಆರೋಪಿಗಳು ಮೈಸೂರು ಕಡೆ ವಾಹನವನ್ನು ಚಲಾಯಿಸಲು ಪ್ರಯತ್ನಿಸುತ್ತಿದ್ದ ವೇಳೆ ರಾಮನಗರ ಪೊಲೀಸರು ಮೈಸೂರು ಮಾರ್ಗದಲ್ಲಿ ಇವರನ್ನು ಬಂಧಿಸಿದರು.
ಸಿಸಿಬಿ ಪೊಲೀಸರು ಇವರನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ ಮತ್ತು ತನಿಖೆ ಮುಂದುವರಿಸಿದ್ದಾರೆ.