ಬೆಂಗಳೂರು: ದ್ವಿತೀಯ ಪಿಯುಸಿಯ 2020-21ರ ಸಾಲಿನ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಪದವಿಪೂರ್ವ ಶಿಕ್ಷಣ ಇಲಾಖೆ ಪ್ರಕಟಿಸಿದ್ದು, ಮಾರ್ಚ್ 4ರಿಂದ 23ರ ತನಕ ನಡೆಯಲಿದೆ.
ಮಾರ್ಚ್ 4ರಂದು ಆರಂಭವಾಗಲಿರುವ ಪರೀಕ್ಷೆಗಳು ಮಾರ್ಚ್ 23ರಂದು ಕೊನೆಯಾಗಲಿದೆ.
ಮಾರ್ಚ್ 4ರಂದು ಇತಿಹಾಸ, ಭೌತಶಾಸ್ತ್ರ, ಬೇಸಿಕ್ ಮ್ಯಾಥ್, ಮಾ.5ರಂದು ತಮಿಳು, ಮಲಯಾಳಂ, ಮರಾಠಿ, ಅರೆಬಿಕ್, ಫ್ರೆಂಚ್, ಮಾ.6ರಂದು ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ ಸಂಗೀತ, ಮಾ.7ರಂದು ಬಿಜೆನೆಸ್ ಸ್ಟಡೀಸ್, ಸಮಾಜಶಾಸ್ತ್ರ, ರಸಾಯನಶಾಸ್ತ್ರ, ಮಾ. 10 ಉರ್ದು, ಮಾ.11ರಂದು ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಗಣಿತ, ಮಾ.12 ಭೂಗೋಳಶಾಸ್ತ್ರ, ಮಾ.13ರಂದು ಶಿಕ್ಷಣ, ಮಾ.14 ಮನೋವಿಜ್ಞಾನ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ವಿಜ್ಞಾನ, ಮಾ.16 ತರ್ಕಶಾಸ್ತ್ರ, ಭೂಗರ್ಭ ಶಾಸ್ತ್ರ, ಗೃಹವಿಜ್ಞಾನ, ಮಾ.17 ಅರ್ಥಶಾಸ್ತ್ರ, ಜೀವಶಾಸ್ತ್ರ, ಮಾ.18, ಹಿಂದಿ, ಮಾ.19ರಂದು ಕನ್ನಡ, ಮಾ.20ರಂದು ಸಂಸ್ಕೃತ, ಮಾ.21 ರಾಜ್ಯಶಾಸ್ತ್ರ, ಸ್ಟಾಟಿಸ್ಟಿಕ್ಸ್, ಮಾ.23 ಇಂಗ್ಲಿಷ್.