ಬೆಂಗಳೂರು: ರಾಜ್ಯದಲ್ಲಿ ಇಂದು 2 ಮಹಾನಗರ ಪಾಲಿಕೆ, 6 ನಗರಸಭೆ, 3 ಪುರಸಭೆ ಹಾಗೂ 3 ಪಟ್ಟಣ ಪಂಚಾಯಿತಿಗಳಿಗೆ ಇಂದು ಮತದಾನ ನಡೆಯುತ್ತಿದೆ.
ವಾರ್ಡುಗಳ ವಿವರ: ಕನಕಪುರ, ಕೋಲಾರ, ಮುಳಬಾಗಿಲಿ, ಕೆಜಿಎಫ್, ಗೌರಿಬಿದನೂರು, ಚಿಂತಾಮಣಿ ನಗರಸಭೆ, ದಾವಣಗೆರೆ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಜೋಗ್ ಕಾರ್ಗಲ್,ಕುಂದಗೋಳ ಹಾಗೂ ಕೂಡ್ಲಿಗಿ ಪಟ್ಟಣ ಪಂಚಾಯಿತಿಗಳಿಗೆ ಇಂದು ಮತದಾನ ನಡೆಯುತ್ತಿದೆ.
ಅದಲ್ಲದೆ ಹೊಳೆನರಸೀಪುರ ಪುರಸಭೆ, ಕೊಳ್ಳೇಗಾಲ ನಗರಸಭೆ, ಚಡಚಣ ಪಟ್ಟಣ ಪಂಚಾಯಿತಿ, ಮಹಾಲಿಂಗಪುರ ಪುರಸಭೆ ಹಾಗೂ ಚಿತ್ತಾಪುರ ಪುರಸಭೆಗಳಿಗೆ ಉಪಚುನಾವಣೆ ಇಂದು ನಡೆಯಲಿದೆ.
ನವೆಂಬರ್ 14ರಂದು ಮತ ಎಣಿಕೆ ನಡೆಯಲಿದೆ.