ಬೆಂಗಳೂರು: ಅನರ್ಹ ಶಾಸಕರ ಬಗ್ಗೆ ಸುಪ್ರೀಂಕೋರ್ಟ್ ಇಂದು ತೀರ್ಪು ನೀಡಲಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬುಧವಾರ ಸಂಜೆ ತನಕ ತನ್ನೆಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ.
ಮುಖ್ಯಮಂತ್ರಿ ಕಚೇರಿಯ ಮೂಲಗಳ ಪ್ರಕಾರ ಯಡಿಯೂರಪ್ಪ ಅವರು ತನ್ನ ಅಧಿಕೃತ ನಿವಾಸದಲ್ಲೇ ಉಳಿಯಲಿದ್ದಾರೆ.
ಅನರ್ಹಗೊಂಡಿರುವ ಎಲ್ಲಾ 15 ಮಂದಿ ಶಾಸಕರು ದೆಹಲಿಯಲ್ಲಿ ಇದ್ದಾರೆ. ಸುಪ್ರೀಂಕೋರ್ಟ್ ನ ತೀರ್ಪು ಹೊರಬಿದ್ದ ಬಳಿಕ ಸಿಎಂ ಇದರ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಮೂಲಗಳು ಹೇಳಿವೆ.
ಎಲ್ಲಾ 15 ಶಾಸಕರ ಅನರ್ಹತೆಯನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದರೆ ಆಗ ಶಾಸಕರ ಕುಟುಂಬ ಸದಸ್ಯರಿಗೆ ಉಪಚುನಾವಣೆಯಲ್ಲಿ ಟಿಕೆಟ್ ನೀಡಲಾಗುವುದು ಎನ್ನುವ ಪ್ರಸ್ತಾವವನ್ನು ಶಾಸಕರು ಒಪ್ಪಿಕೊಂಡಿರುವರು ಎಂದು ಹೇಳಲಾಗಿದೆ.