ಬೆಂಗಳೂರು: ಸುಪ್ರೀಂಕೋರ್ಟ್ ತೀರ್ಪನ್ನು ಗೌರವಿಸಿರುವುದಾಗಿ ಹೇಳಿರುವ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು, ಶಾಸಕರು ಅನರ್ಹ ಎಂದು ಅನಿಸಿಕೊಳ್ಳುವುದು ಒಳ್ಳೆಯ ವಿಚಾರವಲ್ಲ ಎಂದು ಹೇಳಿದರು.
ಶಾಸಕರನ್ನು ಅನರ್ಹಗೊಳಿಸಿರುವ ಸ್ಪೀಕರ್ ಅವರ ನಿರ್ಧಾರವನ್ನು ಸುಪ್ರೀಂಕೋರ್ಟ್ ಕೂಡ ಎತ್ತಿ ಹಿಡಿದಿದೆ. ಆದರೆ ಅನರ್ಹತೆ ಎಷ್ಟು ಅವಧಿಗೆ ಇರಬೇಕು ಎಂದು ನಿರ್ಧರಿಸಲು ಸ್ಪೀಕರ್ ಗೆ ಅಧಿಕಾರವಿಲ್ಲ ಎಂದು ಕೋರ್ಟ್ ಹೇಳಿದೆ.
ತೀರ್ಪಿನಿಂದ ನನಗೆ ಸಂತೋಷವಾಗಿದೆ. ಅನರ್ಹ ಎಂದು ಅನಿಸಿಕೊಳ್ಳುವುದು ಗೌರವದ ವಿಚಾರವಲ್ಲ. ಪಕ್ಷಾಂತರಿಗಳನ್ನು ಇತ್ತೀಚಿನ ಚುನಾವಣೆಗಳಲ್ಲಿ ತಿರಸ್ಕರಿಸಿರುವರು. ಇವರ ವಿಚಾರದಲ್ಲಿ ಏನಾಗುತ್ತದೆ ಎಂದು ಕಾದು ನೋಡಬೇಕು ಎಂದರು.